Select Page

 

 

ಸಾಂಸ್ಥಿಕ ಮತ್ತು ಪರಿಸರದ ಅಡೆತಡೆಗಳ ಬದಿಯಲ್ಲಿ ವಿಕಲಚೇತನರ ಬಗ್ಗೆ ಕುಂಟ ಮನೋಭಾವವು ಸಮಾಜದಲ್ಲಿ ವಿಕಲಚೇತನ ವ್ಯಕ್ತಿಗಳ ತಾರತಮ್ಯ ಮತ್ತು ಹೊರಗಿಡುವಿಕೆಗೆ ಕಾರಣವಾಗಿದೆ.ಇಂತಹ ಸಮಸ್ಯೆಗಳನ್ನು ವಿಕಲಚೇತನರು ಎದುರಿಸಬೇಕಾಗುತ್ತದೆ.ಅದಕ್ಕಾಗಿ ವಿಕಲಚೇತನತೆಯ ಬಗ್ಗೆ,ಅರಿವಿನ ಕೊರತೆಯ ಬಗ್ಗೆ ನಕಾರಾತ್ಮಕ ಮನೋಭಾವವನ್ನು ತೊಡೆದು ಹಾಕಲು ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವ ಫೌಂಡೇಶನ್ ವಿಕಲಚೇತನ ವ್ಯಕ್ತಿಗಳಿಗೆ ಅರಿವಿನ ಬಗ್ಗೆ, ವಿಕಲಚೇತನತೆಯ ಬಗ್ಗೆ,ಮಾಹಿತಿ ನೀಡಿ ವಿಕಲಚೇತನರ ಜೀವನಕ್ಕೆ ಹೊಂಬೆಳಕಾಗಿ ಸ್ಥಿರವಾಗಿ ನೆಲೆಸುವಂತೆ ಕಾರ್ಯ ಮಾಡುತ್ತಿದೆ.

ಅಷ್ಟೇ ಅಲ್ಲದೆ ವಿಕಲಚೇತನರ ಸುಸ್ಥಿರ ಜೀವನೋಪಾಯ ಅವಕಾಶಗಳನ್ನು ಉತ್ತೇಜಿಸಲು ಡೀಲ್ ಫೌಂಡೇಶನ್ ಸಂಸ್ಥೆಯು ಹಲವಾರು ಉದ್ಯೋಗದ ತರಬೇತಿಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಅದರಂತೆ ಗದಗ್ ಜಿಲ್ಲೆಯ ಎಲ್ಲಾ ತಾಲೂಕಿನಿಂದ ಸ್ವ ಸಹಾಯ ಸಂಘದ ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಡೀಲ್ ಫೌಂಡೇಶನ್ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ್ ಇವರ ಸಹಯೋಗದೊಂದಿಗೆ ಆಹಾರ ಉತ್ಪನ್ನಗಳ ಮೌಲ್ಯವರ್ಧನೆ, ಪ್ಯಾಕೇಜಿಂಗ್,ಸೀಲಿಂಗ್ ಮತ್ತು ಎಫ್ ಎಸ್ ಎಸ್ ಎ ಆಯ್(FSSAI) ಅನುಮೋದನೆಯ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.

ಈ ತರಬೇತಿ ಎಲ್ಲ ತಯಾರಿಯನ್ನು ಡೀಲ್ ಫೌಂಡೇಶನ್ ಸಂಸ್ಥೆಯ ಎಲ್ಲಾ ಆಫೀಸರ್ಸ್ ಗಳು ಮತ್ತು ಸಾಗರ್ ವಿರುಪಣ್ಣವರ್ ಅವರ ಹೆಚ್ಚಿನ ಪರಿಶ್ರಮದಿಂದ ಈ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಳ್ಳಲಾಯಿತು.

ಅದರಂತೆ ಕೆಎಸ್ಆರ್ ಡಿ ಪಿ ಆರ್ ಯು ಮತ್ತು ಡೀಲ್ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರ ಒಪ್ಪಿಗೆಯಂತೆ ದಿನಾಂಕ 28.02.2024ರಂದು ಕೆ ಎಸ್ ಆರ್ ಡಿ ಪಿ ಆರ್ ಯು ನ ಫುಡ್ ಸೈನ್ಸ್ ಡಿಪಾರ್ಟ್ಮೆಂಟ್ ಅಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಹಾಗೆ ಪ್ರತಿ ತಾಲೂಕಿನಿಂದ 10 ಜನರಂತೆ ಒಟ್ಟು ನೂರು ವಿಕಲಚೇತನ ಮತ್ತು ಮಹಿಳೆಯರೊಂದಿಗೆ ಈ ತರಬೇತಿಯನ್ನು ನೀಡುವುದಾಗಿ ಎಂದು ತೀರ್ಮಾನಿಸಲಾಯಿತು. ಅದರಂತೆ 28/2/ 2024 ರಂದು ಎಲ್ಲರೂ ಬೆಳಗ್ಗೆ 10 ಗಂಟೆಗೆ ಎಲ್ಲಾ ತಾಲೂಕಿನಿಂದ ಮಹಿಳೆಯರು ಮತ್ತು ವಿಕಲಚೇತನರು ಹಾಗೂ ಡೀಲ್ ಫೌಂಡೇಶನ್ ಸಂಸ್ಥೆಯ ಎಲ್ಲಾ ಕಾರ್ಯಕರ್ತರು ಒಂದು ಕಡೆ ಸೇರಿ ಒಟ್ಟಾಗಿ ಎಲ್ಲರೂ ಕೆ ಎಸ್ ಆರ್ ಡಿ ಪಿ ಆರ್ ಯು ಗೆ ಹೋದರು.ನಂತರ ಅಲ್ಲಿ ಈ ತರಬೇತಿಯ ಸಂಯೋಜಕರಾದ ದೀಪಾ ಮೇಡಂ ಹಾಗೂ ನಾಗರತ್ನ ನಾಯ್ಕ ಅವರು ಎಲ್ಲರನ್ನು ಬರಮಾಡಿಕೊಂಡರು.ನಂತರ ರಿಜಿಸ್ಟರ್ ನಲ್ಲಿ ಸಹಿ ಮಾಡಿಸಿ ಅವರಿಗೆ ಬುಕ್ ಪೆನ್ ನೀಡಿ ಸರದಿಯಂತೆ ತರಬೇತಿಯ ಕೊಠಡಿಗೆ ಕಳುಹಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಎಸ್ ಆರ್ ಡಿ ಪಿ ಯು ಆರ್ ನ ರಿಜಿಸ್ಟರ್ ಆದ ಶ್ರೀ ನಾಡಗೌಡರ್ ಸರ್ ವಹಿಸಿಕೊಂಡಿದ್ದರು.ಅದೇ ರೀತಿ ಕೆ ಎಸ್ ಆರ್ ಡಿ ಪಿ ಯು ಆರ್ ನ ಸಹಾಯಕ ನಿರ್ದೇಶಕರಾದ ಅಬ್ದುಲ್ ಅಜಿಜ್ ಸರ್, ಗಿರೀಶ್ ದೀಕ್ಷಿತ್ ಸರ್, ದೀಪ ಮೇಡಮ್ ಇವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅದೇ ರೀತಿ ಡೀಲ್ ಫೌಂಡೇಶನ್ ವತಿಯಿಂದ ಸಾಗರ್ ವಿರುಪಣ್ಣವರ್ ಶಿವಕುಮಾರ್ ಶಿರೋಳ್ ಇವರೆಲ್ಲರ ಸಮ್ಮಿಲನದಿಂದ ಈ ವೇದಿಕೆಯನ್ನು ಅಲಂಕರಿಸಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ನಂತರ ವೇದಿಕೆ ಮೇಲಿದ್ದ ಎಲ್ಲ ಗಣ್ಯರನ್ನು ಸ್ವಾಗತಿಸಿ ಪುಷ್ಪ ನೀಡಿ ಸನ್ಮಾನಿಸಲಾಯಿತು. ನಂತರ ಈ ತರಬೇತಿಯ ಮೂಲ ಅಸ್ತಿತ್ವ ಸಿರಿಧಾನ್ಯ ಅದರಂತೆ ಸಿರಿಧಾನ್ಯವನ್ನು ಮಡಿಕೆಯಲ್ಲಿ ಹಾಕುವುದರ ಮೂಲಕ ಈ ಕಾರ್ಯಕ್ರಮದ ಜ್ಯೋತಿಯನ್ನು ಬೆಳಗಿಸಿದರು.ನಂತರ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀ ನಾಡಗೌಡ ಸರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಅದು ಪೌಷ್ಟಿಕ ಆಹಾರ ಉತ್ಪನ್ನ ಸಿಗುವ ತರಬೇತಿಯನ್ನು ಪಡೆದುಕೊಂಡು ಉತ್ತಮ ಉತ್ಪನ್ನಗಳನ್ನು ಮಾಡಿ ನೀವು ನಿಮ್ಮ ಜೀವನದಲ್ಲಿ ಬೆಳೆಯಿರಿ ಎಂದು ಎಲ್ಲಾ ವಿಕಲಚೇತನ ಮತ್ತು ಮಹಿಳೆಯರಿಗೆ ಹಾರೈಸಿದರು. ಅದೇ ರೀತಿ ಡೀಲ್ ಫೌಂಡೇಶನ್ ವತಿಯಿಂದ ಸಾಗರ್ ದುರ್ಕೊಂಡ ಅವರು ಕೂಡ ಈ ತರಬೇತಿಯ ಮುಖ್ಯ ಅಂಶಗಳ ಬಗ್ಗೆ ಮಾಹಿತಿ ನೀಡಿದರು.

ನಂತರ ಎಲ್ಲ ಸದಸ್ಯರನ್ನು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ ತರಬೇತಿಯನ್ನು ನೀಡಲು ಕರೆದುಕೊಂಡು ಹೋದರು. ಮೊದಲು ಮೆಕ್ಕೆಜೋಳದ ಸೆವ್ ಮತ್ತು ಮೆಕ್ಕೆಜೋಳದ ರಿಬ್ಬನ್ ಮಾಡುವುದು ಹೇಗೆ ಎಂದು ದೀಪ ಮೇಡಂ ಮತ್ತು ಸುನಂದ ಅವರು ತಿಳಿಸಿಕೊಟ್ಟರು.ದೀಪ ಮೇಡಂ ಮೆಕ್ಕೆಜೋಳದ ಸೆವ್ ಗೆ ಬೇಕಾಗುವ ಪದಾರ್ಥಗಳು ಹಾಗೂ ಎಷ್ಟು ಪ್ರಮಾಣದಲ್ಲಿ ಎಲ್ಲಾ ಪದಾರ್ಥಗಳನ್ನು ಹಾಕಬೇಕು ಎಂದು ಹೇಳಿದರು.ಜೊತೆಗೆ ಸಿರಿಧಾನ್ಯದಿಂದಲೇ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಆಗುವ ಪರಿಣಾಮಗಳ ಬಗ್ಗೆ ಮಾಹಿತಿಯು ಕೂಡ ಹೇಳಿದರು.ನಂತರ ಸುನಂದ ಅವರು ಆ ಪದಾರ್ಥಗಳನ್ನು ತೆಗೆದುಕೊಂಡು ಎಲ್ಲಾ ಸದಸ್ಯರಿಗೂ ತಿಳಿಯುವ ಹಾಗೆ ಮಾಡುವ ವಿಧಾನವನ್ನು ಹೇಳುತ್ತಾ ಹೋದರು. ನಂತರ ಸದಸ್ಯರಿಂದಲೇ ಮಾಡಿಸಿದರು.ಇದರಿಂದ ಅವರಿಗೂ ತಿಳಿಯಲಿ ಎಂದು ಎಲ್ಲರಿಗೂ ಅರ್ಥವಾಗುವ ರೀತಿ ಹೇಳಿದರು.

ನಂತರ ಬಿಳಿ ಜೋಳದ ಹಿಟ್ಟಿನಿಂದ ಚಕ್ಕಲಿ ಮಾಡುವುದು ಹೇಗೆ ಎಂದು ದೀಪ ಮೇಡಂ ಮತ್ತು ಶಕುಂತಲಾ ಅವರು ಹೇಳಿಕೊಟ್ಟರು. ಮೊದಲು ಅದಕ್ಕೆ ಬೇಕಾಗುವ ಪದಾರ್ಥಗಳು ಮತ್ತು ಎಷ್ಟು ಪ್ರಮಾಣದಲ್ಲಿ ಪದಾರ್ಥಗಳನ್ನು ಹಾಕಬೇಕು ಎಂದು ಎಲ್ಲ ಸದಸ್ಯರಿಗೂ ಹೇಳಿದರು ನಂತರ ಅದರಂತೆ ಬಿಳಿ ಜೋಳದ ಚಕ್ಕಲಿಯನ್ನು ಮಾಡಲು ಆರಂಭಿಸಿದರು.ಎಲ್ಲಾ ಸಿಬ್ಬಂದಿಗಳು ತರಬೇತಿದಾರರಿಗೆ ಸಹಕರಿಸಿದರು. ಇದನ್ನು ಕೂಡ ಸದಸ್ಯರಿಗೆ ಮಾಡಲು ಅವಕಾಶ ನೀಡಿದರು. ಎಲ್ಲರೂ ಒಗ್ಗಟ್ಟಿನಿಂದ ಮೆಕ್ಕೆಜೋಳದ ಸೆವ್ ಮತ್ತು ಬಿಳಿ ಜೋಳದ ಹಿಟ್ಟಿನಿಂದ ಚಕ್ಕಲಿಯನ್ನು ತಯಾರಿಸಿದ್ದರು.ಎಲ್ಲ ಸದಸ್ಯರು ಕುತೂಹಲದಿಂದ ಇತರ ಈ ತರಬೇತಿಯಲ್ಲಿ ಭಾಗವಹಿಸಿದ್ದರು.

ಪದಾರ್ಥಗಳನ್ನು ತಯಾರಿಸಿದ ನಂತರ ಅವುಗಳನ್ನು ಹೇಗೆ ಪ್ಯಾಕ್ ಮಾಡಬೇಕು ಹಾಗೂ ಆ ಪಾಕೆಟ್ ಮೇಲೆ ಯಾವ ರೀತಿಯ ಲೇಬಲ್ ಇರಬೇಕು ಎಂದು ಪ್ರೀತಿ ಅವರು ಹೇಳಿಕೊಟ್ಟರು.ಈ ಪ್ಯಾಕಿಂಗ್ ಅನ್ನು ಎರಡು ರೀತಿಯ ಹಾಳೆಯಲ್ಲಿ ಮಾಡಬಹುದು.ನಂತರ ಅದರ ಮೇಲೆ ಅಂಗಡಿಯ ಗುರುತಿನ ಚಿಹ್ನೆ, ಅಂಗಡಿ ಹೆಸರು,ಪದಾರ್ಥವನ್ನು ತಯಾರಿಸಿದ ದಿನಾಂಕ, ಮುಗಿಯುವ ದಿನಾಂಕ, ಪದಾರ್ಥಗಳಿಂದ ಆರೋಗ್ಯದಲ್ಲಿ ಆಗುವ ಲಾಭಗಳು,ಪದಾರ್ಥಕ್ಕೆ ಬಳಸಿದ ಸಾಮಗ್ರಿಗಳು ಈ ರೀತಿ ಎಲ್ಲ ಮಾಹಿತಿಯನ್ನು ಈ ಪ್ಯಾಕೇಜಿಂಗ್ ಪ್ಯಾಕೇಟ್ ಮೇಲೆ ಹಾಕಬೇಕು ಎಂದು ಡೆಮೋ ಮಾಡಿ ಎಲ್ಲ ಸದಸ್ಯರಿಗೂ ಪ್ರೀತಿ ಅವರು ವಿವರವಾಗಿ ಮಾಹಿತಿಯನ್ನು ನೀಡಿದರು.

ಮಧ್ಯಾಹ್ನ ಡೀಲ್ ಫೌಂಡೇಶನ್ ವತಿಯಿಂದ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.ಎಲ್ಲಾ ಸದಸ್ಯರು ಮತ್ತು ಸಿಬ್ಬಂದಿಗಳು ಊಟವನ್ನು ಮಾಡಿದ ನಂತರ ಆಹಾರ ಸಂಸ್ಕರಣೆಯ ಎಫ್ ಎಸ್ಎಸ್ಎ ಐ ನೋಂದಣಿ ಮತ್ತು ಪ್ರಾಮಾಣಿಕರಣ ಪ್ರಕ್ರಿಯೆ ಬಗ್ಗೆ ಆಹಾರ ನಿರೀಕ್ಷಕರಾದ ಚೇತನ್ ಅವರು ಮಾಹಿತಿ ನೀಡಿದರು. ಇದರಲ್ಲಿ ಆಹಾರವನ್ನು ಸಂಸ್ಕರಣೆ ಮಾಡುವವರು,ಚಿಲ್ಲರೆ ವ್ಯಾಪಾರ ಮಾಡುವವರು,ಹಾಲಿನ ವ್ಯಾಪಾರ ಮಾಡುವವರು ಮುಂತಾದ ವ್ಯಾಪಾರಸ್ಥರು ಸರ್ಕಾರದ ವತಿಯಿಂದ ಪ್ರಾಮಾಣಿಕರಣ ಪಡೆದುಕೊಳ್ಳಬೇಕು.ಅದರಲ್ಲಿ ಮುಖ್ಯವಾಗಿ ಆಹಾರ ಪ್ಯಾಕಿಂಗ್ ಮಾಡುವವರು ಎಫ್ ಎಸ್ ಎಸ್ ಎ ಐ ನಿಂದ ಐಎಸ್ಐ ಮಾರ್ಕನ್ನು ಹೊಂದಿರಬೇಕು ಇಲ್ಲವಾದರೆ ಸರ್ಕಾರದಿಂದ ದಂಡ ಮತ್ತು ಜೈಲು ಶಿಕ್ಷೆಗೆ ಒಳಗಾಗುತ್ತಾರೆ.ಜೊತೆಗೆ ಅವರು ಮಾಡುತ್ತಿದ್ದ ವ್ಯಾಪಾರವೂ ಕೂಡ ಬ್ಯಾನ್ ಮಾಡುತ್ತಾರೆ ಮತ್ತು ಸೆಕ್ಷನ್ ಗಳ ಮೂಲಕ ಇರೋ ಕಾಯ್ದೆಗಳ ಬಗ್ಗೆ ಸ್ವ ವಿವರವಾಗಿ ತರಬೇತಿದಾರರಿಗೆ ಉದಾಹರಣೆ ಕೊಡುವುದರ ಮೂಲಕ ಮಾಹಿತಿಯನ್ನು ನೀಡಿದರು.ಜೊತೆಗೆ ಸರ್ಕಾರದಿಂದ ಪ್ರಮಾಣಿಕರಣ ಹೊಂದದೆ ಯಾರಾದರೂ ಮಾರಾಟ ಮಾಡುತ್ತಿದ್ದರೆ ಅಥವಾ ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು ಎಂದು ತಮ್ಮ ವಿಳಾಸವನ್ನು ತಿಳಿಸಿಕೊಟ್ಟರು.

ನಂತರ ಆಹಾರ ಉತ್ಪನ್ನ ಮಾಡುವುದು ಹೇಗೆ,ಅದರ ಪ್ಯಾಕೇಜಿಂಗ್ ಮಾಡುವುದು ಹೇಗೆ, ಸರ್ಟಿಫಿಕೇಷನ್ ಬಗ್ಗೆ ತಿಳಿಸಿಕೊಟ್ಟರು ಇದೆಲ್ಲದಕ್ಕೂ ಮುಖ್ಯವಾಗಿರುವುದು ಮಾರಾಟ ಮಾಡುವುದು ಹೇಗೆ ಎಂಬುದನ್ನು ಆರ್ಡಿಪಿಯುಆರ್ ನಲ್ಲಿ ಶಿಕ್ಷಣ ತಜ್ಞರಾದ ರಂಗಪ್ಪ ಸರ್ ಅವರು ತಿಳಿಸಿಕೊಟ್ಟರು.ಅದು ನಾವು ತಯಾರಿಸಿದ ಆಹಾರವನ್ನು ಮಾರುಕಟ್ಟೆಯಲ್ಲಿ ನಾವು ಹೇಗೆ ಮಾರಾಟ ಮಾಡಬೇಕು ಎಂಬುದನ್ನು ಹೇಳಿದರು.ಮೊದಲು ನಾವು ಮಾಡುವ ಬಿಸಿನೆಸ್ ಗೆ ಮಾರುಕಟ್ಟೆಯಲ್ಲಿ ಅದು ಎಷ್ಟು ಅವಶ್ಯಕತೆ ಇದೆ ಎಂದು ಸರ್ವೇ ಮಾಡಿ ನಂತರ ಪ್ರತಿ ಅಂಗಡಿಗಳಿಗೂ ಹೋಗಿ ಸ್ಯಾಂಪಲ್ ಕೊಡಬೇಕು.ಹೀಗೆ ದಿನ ಕಳೆದ ಹಾಗೆ ಕಡಿಮೆ ರೇಟಿನಲ್ಲಿ ಮಾರಾಟ ಮಾಡಬೇಕು.ನಂತರ ಕ್ವಾಂಟಿಟಿ ಕೆಡದ ಹಾಗೆ ಏರುಪೇರು ಆಗದ ಹಾಗೆ ಮಾರುಕಟ್ಟೆಯಲ್ಲಿ ಸ್ಥಾನ ಸಿಗುವ ವರೆಗೂ ಹೀಗೆ ಮಾಡಬೇಕು. ಅಲ್ಲಿ ಪ್ರಗತಿ ಹೊಂದಿದ ನಂತರ ಒಂದು ಊರು ಆದ ನಂತರ ಬೇರೆ ಊರಿಗೂ ಸ್ಯಾಂಪಲ್ ಕೊಟ್ಟು ವ್ಯಾಪಾರ ಆರಂಭಿಸಬೇಕು ಹೀಗೆ ಒಂದೊಂದೇ ಹೆಜ್ಜೆಯ ಮೆಟ್ಟಿಲು ಹತ್ತಿದಾಗ ಮಾತ್ರ ಮಾರುಕಟ್ಟೆಯಲ್ಲಿ ನಾವು ತಯಾರಿಸಿದ ಆಹಾರಕ್ಕೆ ಬೆಲೆ ಸಿಗುತ್ತದೆ ಎಂದು ಉದಾರಣೆ ಹೇಳುತ್ತಾ ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು.

ಕೊನೆಗೆ ತರಬೇತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಸಾಗರ ವಿರುಪಣ್ಣವರ್ ವಂದನಾರ್ಪಣೆಯನ್ನು ಸಲ್ಲಿಸಿದರು. ನಂತರ ತರಬೇತಿಯಲ್ಲಿ ಸದಸ್ಯರೇ ಮಾಡಿದ ಮೆಕ್ಕೆಜೋಳದ ಸೆವ್ ಮತ್ತು ಜೋಳದ ಹಿಟ್ಟಿನ ಚಕ್ಕಲಿಯನ್ನು ಟೀ ಜೊತೆಗೆ ಕೊಟ್ಟು ಈ ಒಂದು ದಿನದ ತರಬೇತಿಯನ್ನು ಮುಗಿಸಿದರು.

ಈ ರೀತಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ಕೆಎಸ್ ಆರ್ಡಿಪಿ ಆರ್ ಯು ಸಹಯೋಗದೊಂದಿಗೆ ವಿಕಲ ಚೇತನರಿಗೂ ಮತ್ತು ಮಹಿಳೆಯರಿಗೆ ಒಂದು ದಿನದ ಆಹಾರ ಉತ್ಪನ್ನಗಳ ಮೌಲ್ಯವರ್ಧನೆ,ಪ್ಯಾಕೇಜಿಂಗ್ ಸೀಲಿಂಗ್ ಮತ್ತು ಎಫ್ಎಸ್ಎಸ್ಎ ಆಯ್ ಅನುಮೋದನೆ ತರಬೇತಿಯನ್ನು ನೀಡಿದರು. ಇದರಿಂದ ಅನೇಕ ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಸ್ವಾವಲಂಬನೆ ಜೀವನಕ್ಕೆ ಒಂದು ಅವಕಾಶ ಸಿಕ್ಕಂತಾಯಿತು.ಹೀಗೆ ಇನ್ನೂ ಹೆಚ್ಚಿನ ತರಬೇತಿಯನ್ನು ಡೀಲ್ ಫೌಂಡೇಶನ್ ಸಂಸ್ಥೆ ಹೀಗೆ ನೀಡುತ್ತಿರಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆ ಬೆಳೆಯಲಿ ಎಂದು ಭಾಗವಹಿಸಿದ ಏಲ್ಲಾ ತರಬೇತಿದಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಹಾರೈಸಿದರು.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This