Select Page

 

ವಿಕಲಚೇತನ ವ್ಯಕ್ತಿಗಳಿಗೆ ಅಗತ್ಯವಿರುವ ಜೀವನೋಪಾಯ, ಉದ್ಯಮಶೀಲತೆ, ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು,ರೋಲ್ ಮಾಡೆಲ್ ಗಳು ಮತ್ತು ಮಾದರಿ ಉದ್ಯಮಗಳು ವಿಕಸನಗೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಪರಿಸರ ವ್ಯವಸ್ಥೆಯನ್ನು ಪೋಷಿಸುವುದು ವಿಕಲಚೇತನ ವ್ಯಕ್ತಿಗಳ ಜೀವನದಲ್ಲಿ ಶಾಶ್ವತವಾದ ಪ್ರಭಾವವನ್ನು ಸೃಷ್ಟಿಸಲು ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ತಾಲೂಕಿನಲ್ಲಿ ಕೌಶಲ್ಯ ಅಭಿವೃದ್ಧಿ ಮೂಲಕ ವಿಕಲಚೇತನರು ಮತ್ತು ಮಹಿಳೆಯರೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಡೀಲ್ ಫೌಂಡೇಶನ್ ಸಂಸ್ಥೆಯು ಎಂಪವರ್,ಎಂಗೇಜ್,ಎಕ್ಸಿಕ್ಯೂಟ್,ಮತ್ತು ಎಕ್ಸಿಟ್ ಎಂಬ ನಾಲ್ಕು ರೀತಿಯ ಮಾದರಿಯೊಂದಿಗೆ ವಿಕಲಚೇತನರ ನೈಜ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಸಮುದಾಯದೊಂದಿಗೆ ತೊಡಗಿಸಿಕೊಳ್ಳುವುದರ ಮೂಲಕ ವಿಕಲಚೇತನರಿಗೆ ತಾಂತ್ರಿಕ ತರಬೇತಿ,ಆರ್ಥಿಕ ಸಾಕ್ಷರತೆಯನ್ನು ಒದಗಿಸುವುದರ ಮೂಲಕ ವಿಕಲಚೇತನ ಮತ್ತು ಮಹಿಳೆಯರಿಗೆ ಡೀಲ್ ಫೌಂಡೇಶನ್ ಸಂಸ್ಥೆಯು ಸಹಾಯ ಮಾಡುತ್ತಿದೆ.ಇದರಿಂದ ಪ್ರೇರಿತಗೊಂಡು ವಿಕಲಚೇತನರು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಅದರಲ್ಲಿ “ಕಲ್ಮೇಶ್ ಬಸವರಾಜ್ ಎಣಿಗಾರ”. ಇವರು ಶಿರಹಟ್ಟಿ ತಾಲೂಕಿನ ಕೊಂಚಿಗೇರಿ ಗ್ರಾಮದವರು.ಇವರು ದೈಹಿಕ ವಿಕಲಚೇತನತೆಯನ್ನು ಹೊಂದಿದ್ದಾರೆ. ಅಂದರೆ ಅವರ ಎಡಗೈ ಸಂಪೂರ್ಣವಾಗಿ ವಿಕಲಚೇತನತೆಯನ್ನು ಹೊಂದಿದ್ದಾರೆ. ಹುಟ್ಟಿನಿಂದ ಯಾವುದೇ ತೊಂದರೆ ಇರಲಿಲ್ಲ ಬಡತನ ಪರಿಸ್ಥಿತಿ ಇದ್ದರೂ ತಂದೆ ತಾಯಿಯ ಜೊತೆಗೆ ಒಬ್ಬರೇ ಮುದ್ದಿನ ಮಗನಾಗಿ ಬೆಳೆದರು. 7ನೇ ತರಗತಿಯವರಿಗೆ ಸರ್ಕಾರಿ ಶಾಲೆಗೆ ಹೋದರು ಮುಂದೆ ಪ್ರೌಢಶಾಲೆಗೆ ಹೋಗಲು ಅವರಿಗೆ ಆಗಲಿಲ್ಲ ಕಾರಣ ತಾಯಿ ಕೂದಲು ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಜೊತೆಗೆ ಕುಟುಂಬದ ಮನಸ್ಸ ಸ್ಥಾಪದಿಂದ ಇವರ ತಂದೆ ಇವರನ್ನು ಬಿಟ್ಟು ಹೋದರು. ಕಲ್ಮೇಶ ಅವರ ತಾಯಿಗೆ ದಾರಿ ಕಾಣದಂತಾಯಿತು. ಈ ಸಮಾಜ ಅವರನ್ನು ಚುಚ್ಚು ಮಾತಿನಿಂದ ನೋಯಿಸುತ್ತಿತ್ತು ಆದರೂ ಈ ಸಮಾಜಕ್ಕೆ ಎದುರಾಗಿ ತಮ್ಮ ಮಗನನ್ನು ಎಲ್ಲ ಮಕ್ಕಳಂತೆ ಬೆಳೆಸಿದರು.ತಾಯಿಯ ಜೊತೆಗೆ ಕೂಲಿ ಕೆಲಸಕ್ಕೆ ಕಲ್ಮೇಶ ಅವರು ಹೋಗುತ್ತಿದ್ದರು.ಹೀಗೆ ಇವರ ತಾಯಿಯೊಂದಿಗೆ ಕಷ್ಟದ ಪರಿಸ್ಥಿತಿ ಇದ್ದರೂ ಖುಷಿಯಾಗಿ ಜೀವನ ಸಾಗಿಸುತ್ತಿದ್ದರು.

ದಿನ ಕಳೆದ ಹಾಗೆ ಆರ್ಥಿಕ ಪರಿಸ್ಥಿತಿ ಕಲ್ಮೇಶ್ ಅವರಿಗೆ ಕಷ್ಟ ಆಯ್ತು ಆಗ ಬೇರೆ ಕೂಲಿ ಕೆಲಸ ಮಾಡಲು ಕೇರಳಕ್ಕೆ ಹೋದರು. ಅಲ್ಲಿ ಕೆಲಸ ಮಾಡುವಾಗ ಮಷೀನ್ ನಲ್ಲಿ ಇವರ ಕೈ ಸಿಕ್ಕು ತುಂಡಾಯಿತು. ಪೂರ್ತಿ ಎಡಗೈ ಕಟ್ಟಾಯಿತು.ಇವರ ತಾಯಿ & ಕಲ್ಮೇಶ್ವರ ಅವರ ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಲ್ಲ ಚಿಕಿತ್ಸೆ ಮಾಡಿಸಿದರು. ಕುಟುಂಬವನ್ನು ನಡೆಸಿಕೊಂಡು ಹೋಗುತ್ತಿದ್ದ ಮಗನಿಗೆ ಹೀಗೆ ಆಯಿತಲ್ಲ ಎಂದು ಅವರ ತಾಯಿ ಚಿಂತೆಗೆ ಒಳಗಾದರು. ಆದರೂ ಆ ವಯಸ್ಸಿನಲ್ಲಿ ಮತ್ತೆ ಮನೆ ಕೆಲಸಕ್ಕೆ ಹೋಗಲು ಆರಂಭಿಸಿದರು.ಇದರಿಂದ ಕಲ್ಮೇಶ ಅವರು ಚೇತರಿಸಿಕೊಳ್ಳುತ್ತ ಆರಾಮ ಆದರು.ಸ್ವಲ್ಪ ದಿನ ಅವರ ಮನಸ್ಸಿಗೆ ನೋವು ಉಂಟಾಯಿತು.ಆದರೂ ನಾನು ಹೀಗೆ ಇದ್ದರೆ ನನ್ನ ತಾಯಿಗೆ ನಾನು ಹೊರೆ ಆಗುತ್ತೇನೆ ಎಂದು ಯೋಚಿಸಿ ಬೇರೆಯವರ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗಿ ಸ್ವಲ್ಪಮಟ್ಟಿಗೆ ತಾಯಿಯ ಹೊರೆಯನ್ನು ಕಡಿಮೆ ಮಾಡಿದರು.ಹೀಗೆ ದೇವರ ಕೃಪೆಯಿಂದ ಇವರ ಜೀವನ ಸಾಗುತ್ತಿತ್ತು.

ಮುಂದೆ ಇವರಿಗೆ ಮದುವೆಯಾಯಿತು.ಇವರ ಕುಟುಂಬವು ಕಷ್ಟದ ಪರಿಸ್ಥಿತಿ ಇದ್ದರೂ ಖುಷಿಯಿಂದ ಕೂಡಿತ್ತು. ಇವರು ಇದ್ದ ಮನೆಯ ಪಂಚಾಯಿತಿಯ ಜಾಗದ ಮನೆಯಲ್ಲಿ ಇವರು ವಾಸವಾಗಿದ್ದರು ಅದನ್ನು ಅವರ ಹೆಸರಿನಂತೆ ಮಾಡಿಕೊಳ್ಳಲು ಪಂಚಾಯಿತಿ ವತಿಯಿಂದ ತಹಶೀಲ್ದಾರ ಅವರು ಮನೆಯ ಫೋಟೋ ಮತ್ತು ಎಲ್ಲ ದಾಖಲಾತಿಗಳನ್ನು ತಂದು ಕೊಡಿ ಎಂದು ಹೇಳಿದರು.ಆಗ ಒಂದು ಫೋಟೋ ತೆಗೆಯಲು 500 ರೂಪಾಯಿಯನ್ನು ಕೇಳಿದರು ಆಗ ಕಲ್ಮೇಶ ಅವರು ಆ ಕ್ಷಣದ ಕಾರ್ಯ ಸಾಗಿಸಲು 500 ರೂಪಾಯಿ ಕೊಟ್ಟು ಫೋಟೋ ತೆಗೆಸಿ ಎಲ್ಲ ದಾಖಲಾತಿಯೊಂದಿಗೆ ಒಪ್ಪಿಸಿದರು. ಇದರಿಂದ ಆಗ ಅವರಿಗೆ ನಾನು ಫೋಟೋಗ್ರಫಿ ಕೆಲಸ ಮಾಡಿ ಜನರಿಗೆ ಸಹಾಯ ಮಾಡುತ್ತೇನೆ ಎಂದು ತೀರ್ಮಾನಿಸಿ ಮೊದಲು 3000/- ಕೊಟ್ಟು ಕ್ಯಾಮೆರಾ ತೆಗೆದುಕೊಂಡು ಫೋಟೋಗ್ರಫಿ ಕೆಲಸ ಆರಂಭಿಸಿದರು.ತಮ್ಮ ಊರಿನ ಜನರಿಗೆ ಕಡಿಮೆ ಬೆಲೆಗೆ ಫೋಟೋ ತೆಗೆದುಕೊಡುತ್ತಾ ಹಳ್ಳಿಯ ಜನರಿಗೂ ನೆರವಾದರೂ ಹೀಗೆ ಇದರಿಂದ ಆರಂಭವಾದ ಇವರ ಫೋಟೋಗ್ರಫಿ ಕೆಲಸದ ಜೀವನ ಒಳ್ಳೆಯ ರೀತಿಯಲ್ಲಿ ಸಾಗಿತು.ನಂತರ 10,000 ಕೊಟ್ಟು ಕ್ಯಾಮೆರಾವನ್ನು ತೆಗೆದುಕೊಂಡು ತಮ್ಮದೇ ಆದ ಪುಟ್ಟ ಅಂಗಡಿಯನ್ನು ಇಟ್ಟು ನಡೆಸಿಕೊಂಡು ಹೋದರು.

ಇದರಿಂದ ಇವರ ಆರ್ಥಿಕ ಪರಿಸ್ಥಿತಿ ಬೆಳೆಯಿತು.ನಂತರ ಇವರಿಗೆ 2 ಹೆಣ್ಣು ಮಗು ಮತ್ತು ಒಂದು ಗಂಡು ಮಗುವಿನೊಂದಿಗೆ ಇವರ ಕುಟುಂಬವು ಖುಷಿಯಿಂದ ಕೂಡಿತ್ತು.ನಂತರ ಒಂದು ಲಕ್ಷದ ಕ್ಯಾಮರವನ್ನು ತೆಗೆದುಕೊಂಡು ಮದುವೆ ಸಮಾರಂಭಗಳಿಗೆ ಆರ್ಡರ್ ಹಿಡಿದು ತಮ್ಮ ದುಡಿಮೆಯನ್ನು ಹೆಚ್ಚಿಸಿದರು. ಒಂದು ಮದುವೆಗೆ ಇವರೆಲ್ಲಾ ಖರ್ಚು ತೆಗೆದು 10,000 ಲಾಭವಾಗುತ್ತಿತ್ತು.ಆದರೆ ಫೋಟೋ ಡಿಸೈನ್ ಮಾಡಲು ಇವರಿಗೆ ಬರುತ್ತಿರಲಿಲ್ಲ ಅದನ್ನು ಬೇರೆಯವರಿಗೆ ಕೊಟ್ಟು ಫೋಟೋ ಆಲ್ಬಮ್ ಡಿಸೈನ್ ಮಾಡಿಸಿ ಕೊಡುತ್ತಿದ್ದರು.ಇವರ ಆಸೆ ಆ ರೀತಿಯ ಡಿಸೈನ್ ಮಾಡುವುದನ್ನು ಕಲಿತು ತಮ್ಮದೇ ಆದ ಇನ್ನೂ ದೊಡ್ಡ ಪ್ರಮಾಣದ ಅಂಗಡಿ ಹಾಕಿ ನನ್ನಂತಹ ವಿಕಲಚೇತನರಿಗೆ ಅಲ್ಲಿ ಕೆಲಸಕ್ಕೆ ಕೊಟ್ಟು ಅವರನ್ನು ಈ ಸಮಾಜದಲ್ಲಿ ಗುರುತಿಸುವಂತೆ ಮಾಡಬೇಕು ಎಂಬ ಅಭಿಲಾಷೆ ಕನಸು ಕಲ್ಮೇಶ ಅವರದಾಗಿದೆ.

ಹೀಗಿರುವಾಗ ಇವರನ್ನು ಡೀಲ್ ಫೌಂಡೇಶನ್ ಸಂಸ್ಥೆಯ ಶಿರಹಟ್ಟಿ ತಾಲೂಕಿನ ಲವ್ಲಿವುಡ್ ಆಫೀಸರ್ ಆದ ರೇಖಾ ಮಡ್ಡಿ ಇವರನ್ನು ಗುರುತಿಸಿ ಡೀಲ್ ಫೌಂಡೇಶನ್ ಮಾಡುತ್ತಿರುವ ಕಾರ್ಯವೈಕರಿಗಳ ಬಗ್ಗೆ ಸ್ವ ವಿವರವಾಗಿ ಮಾಹಿತಿ ನೀಡಿದರು. ಆಗ ಕಲ್ಮೇಶ ಅವರು ಡೀಲ್ ಫೌಂಡೇಶನ್ ಸಂಸ್ಥೆ ಕಾರ್ಯಗಳ ಬಗ್ಗೆ ತಿಳಿದು ಮೆಚ್ಚುಗೆ ಸಲ್ಲಿಸಿದರು. ವಿಕಲಚೇತನರಿಗೆ ನಾನು ಕೂಡ ಸಹಾಯ ಮಾಡಬೇಕೆಂಬ ಇವರ ಉದ್ದೇಶಕ್ಕೆ ಡಿ ಫೌಂಡೇಶನ್ ಸಂಸ್ಥೆಯು ನೆರವಾಗುತ್ತಿದೆ.ನಂತರ ರೇಖಾ ಅವರ ಸಹಾಯದಿಂದ ಅಲ್ಲಿನ ಎಲ್ಲ ವಿಕಲಚೇತನರು ಸೇರಿ “ಶ್ರೀ ಗಜಾನನ ವಿಕಲಚೇತನರ ಸ್ವಸಹಾಯ ಸಂಘ”ವನ್ನು ರಚಿಸಿದರು. ಈ ಸಂಘದ ಎಲ್ಲ ಜವಾಬ್ದಾರಿಯನ್ನು ಕಲ್ಮೇಶ ಅವರೇ ನಡೆಸಿಕೊಂಡು ಹೋಗುತ್ತಿದ್ದಾರೆ. ನಂತರ ಈ ಸಂಘಕ್ಕೆ ಡೀಲ್ ಫೌಂಡೇಶನ್ ವತಿಯಿಂದ ಎಲ್ಲ ತರಬೇತಿಯನ್ನು ನೀಡಲಾಯಿತು. ಈ ಸ್ವ ಸಹಾಯ ಸಂಘವನ್ನು ರಚನೆ ಮಾಡುವುದರ ಮೂಲ ಉದ್ದೇಶ ಪಂಚಾಯತಿ ವತಿಯಿಂದ ಬರುವ ಅನುದಾನವನ್ನು ಪಡೆದುಕೊಂಡು ನಮ್ಮ ಸುತ್ತಲೂ ಬರುವ ಹಳ್ಳಿಗಳಿಗೆ ಅನುಕೂಲವಾಗಿ ವಿಕಲಚೇತನರಿಗಾಗಿ ಸಮುದಾಯ ಭವನವನ್ನು ಕಟ್ಟಿ ಅಲ್ಲಿ ವಿಕಲಚೇತನರಿಗಾಗಿ ತರಬೇತಿ ನೀಡಲು,ಉದ್ಯೋಗ ಮಾಡಲು ಅಲ್ಲಿ ಅವಕಾಶ ಸಿಗುವಂತೆ ಮಾಡಿ ನಂತರ ಫೋಟೋಗ್ರಾಫಿ ಯನ್ನು ಕಲಿಯಲು ಇಷ್ಟವಿರುವ ವಿಕಲ ಚೇತನರಿಗೆ ಅಲ್ಲಿ ಅದರ ಬಗ್ಗೆ ತಿಳಿಸಿಕೊಟ್ಟು ವಿಕಲಚೇತನರು ಕೂಡ ಯಾವುದರಲ್ಲಿಯೂ ಕಡಿಮೆ ಇಲ್ಲ ಎಂದು ತೋರಿಸಬೇಕು ಎಂಬ ಉದ್ದೇಶದಿಂದ ಈ ಸ್ವ ಸಹಾಯ ಸಂಘವನ್ನು ರಚನೆ ಮಾಡಿದರು. ಜೊತೆಗೆ ಡೀಲ್ ಫೌಂಡೇಶನ್ ಸಂಸ್ಥೆಯ ಸಹಕಾರದಿಂದ ಈ ಸಂಘದಿಂದ ಸಾಲವನ್ನು ಪಡೆದುಕೊಂಡು ಡ್ರೋನ್ ಕ್ಯಾಮೆರಾ ಅನ್ನು ಪಡೆದುಕೊಂಡು ನನ್ನದೇ ಆದ ವಿಕಲಚೇತನರ ಒಕ್ಕೂಟ ಮಾಡಿ ಎಲ್ಲಾ ರೀತಿಯ ಫೋಟೋಗ್ರಾಫಿ ಕೆಲಸವನ್ನು ಮಾಡಬೇಕು ಎಂಬ ಕನಸು ಕಲ್ಮೇಶ ಅವರು ಹೊಂದಿದ್ದಾರೆ.ಅದರಂತೆ ರೇಖಾ ಅವರು ಈ ಸಂಘಕ್ಕೆ ಬ್ಯಾಂಕಿನಿಂದ ಸಾಲ ಕೊಡಿಸಲು ಎಲ್ಲ ರೀತಿಯ ದಾಖಲಾತಿಯೊಂದಿಗೆ ತಯಾರಿ ನಡೆಸಿದ್ದಾರೆ.

ಈ ರೀತಿಯಾಗಿ ವಿಕಲಚೇತರಿನಿಗೆ ಸಹಾಯ ಮಾಡಬೇಕು ನಮ್ಮ ಊರಿನ ವಿಕಲಚೇತನರಿಗೆ ಸಹಾಯ ಮಾಡಬೇಕು ಎಂಬ ಹೃದಯವುಳ್ಳ ಮನಸ್ಸಿನ ವ್ಯಕ್ತಿತ್ವ ಕಲ್ಮೇಶ ಅವರದ್ದಾಗಿದೆ.ಡೀಲ್ ಫೌಂಡೇಶನ್ ಸಂಸ್ಥೆಯಿಂದ ನನಗೂ ಮತ್ತು ನನ್ನ ಊರಿನ ವಿಕಲಚೇತನರಿಗೆ ಭವಿಷ್ಯದ ಜೀವನಕ್ಕೆ ಮೆಟ್ಟಿಲಾಗಿದೆ.ಅದು ವಿಕಲಚೇತನರ ಒಕ್ಕೂಟ ಮಾಡುವುದು ಹೇಗೆ ಎಂದು ತಿಳಿದಿರಲಿಲ್ಲ ಆಗ ರೇಖಾ ಅವರಿಂದ ನಮ್ಮದೇ ಆದ ಸಂಘವನ್ನು ರಚಿಸಿ ಕೊಟ್ಟು ಪಂಚಾಯಿತಿಯಿಂದ ಬರುವ ಅನುದಾನವನ್ನು ಮತ್ತು ಡೀಲ್ ಫೌಂಡೇಶನ್ ನಿಂದ ಅನೇಕ ಉದ್ಯೋಗದ ತರಬೇತಿ ಮತ್ತು ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಸಿಗುವಂತಾಯಿತು.ಅದಕ್ಕಾಗಿ ನಮ್ಮ ಊರಿನ ವಿಕಲಚೇತನರ ಪರವಾಗಿ ನಾನು ಡೀಲ್ ಫೌಂಡೇಶನ್ ಸಂಸ್ಥೆಗೆ ಮತ್ತು ರೇಖಾ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇನೆ. ಹಾಗೂ ಡೀಲ್ ಫೌಂಡೇಶನ್ಮ ಸಂಸ್ಥೆಯು ವಿಕಲಚೇತನರಿಗಾಗಿ ಸುಸ್ಥಿರ ಜೀವನೋಪಾಯವನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ರಚಿಸುವ ಗುರಿಗಾಗಿ ನಾವು ಕೂಡ ಸಹಾಯ ಮಾಡುತ್ತೇವೆ ಮತ್ತು ಯಶಸ್ಸಿನ ಮಾದರಿಗಳನ್ನು ರಚಿಸಲು ಸಹಾಯ ಮಾಡುತ್ತೇವೆ ಮತ್ತು ಡೀಲ್ ಫೌಂಡೇಶನ್ ಸಂಸ್ಥೆ ಹೀಗೆ ಇನ್ನೂ ಹೆಚ್ಚಿನ ಕಾರ್ಯಗಳು ಪ್ರಗತಿಯನ್ನು ಸಾಧಿಸಿ ವಿಕಲಚೇತನರಿಗೆ ಬೆಳಕಾಗಲಿ ಎಂದು ಹಾರೈಸಿದ್ದಾರೆ.

ಹೀಗೆ ವಿಕಲಚೇತನರಿಗೆ ಮನ ಮುಟ್ಟುವ ಕೆಲಸ ಪ್ರತಿ ತಾಲೂಕಿನಲ್ಲಿಯೂ ಡೀಲ್ ಫೌಂಡೇಶನ್ ಸಂಸ್ಥೆ ಮಾಡುತ್ತಿದೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-Foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-Foundation ಗೆ ಲಾಗ್ ಇನ್ ಮಾಡಿರಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This