Select Page

ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವ ಪ್ರತಿಷ್ಠಾನದ ಕಾರ್ಯಕರ್ತರು ಗದಗ್ ಜಿಲ್ಲೆಯಾದ್ಯಂತ ವಿಕಲಚೇತನರ ಮತ್ತು ಮಹಿಳೆಯರೊಡನೆ ಕಾರ್ಯ ಆರಂಭಿಸಿದರು.ಇದರಿಂದ 3000 ವಿಕಲಚೇತನ ಮತ್ತು ಒಂದು ಸಾವಿರ ಮಹಿಳೆಯರ ಮಾಹಿತಿಯನ್ನು ಪಡೆದುಕೊಂಡು ಅವರಿಗೆ ಅರಿವಿನ ಸಿಂಚನ ಕಾರ್ಯಕ್ರಮದ ಮೂಲಕ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯ ಆರಂಭವಾಯಿತು. ಇದರಿಂದ ನಮಗೆ ತಿಳಿದು ಬಂದಿರುವುದು ಅರಿವಿನ ಕೊರತೆ ಮತ್ತು ವಿಕಲಚೇತನತೆಯು ನಿರಂತರವಾಗಿ ಸಮಸ್ಯೆಯಾಗಿ ಕಂಡುಬಂದಿದೆ.

ಜೊತೆಗೆ ಹೆಚ್ಚಿನ ವಿಕಲಚೇತರು ತಮ್ಮ ಮನೆಗಳಿಗೆ ಮಾತ್ರ ಸೀಮಿತವಾಗಿರುತ್ತಾರೆ.ಇದರಿಂದ ಉತ್ತಮ ಶಿಕ್ಷಣ,ಉದ್ಯೋಗ ಮತ್ತು ಸಮಾಜಕ್ಕೆ ತಮ್ಮನ್ನು ತಾವು ಸಾಬೀತುಪಡಿಸಲು ಮೂಲಭೂತ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ.ಇದು ಹಿಂದಿನಿಂದಲೂ ನಿರಂತರ ಸಮಸ್ಯೆಯಾಗಿದೆ.ಆದರೆ ಈಗ ಬದಲಾಗುತ್ತಿರುವ ಕಾಲದೊಂದಿಗೆ ವಿಕಲಚೇತನ ವ್ಯಕ್ತಿಗಳಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲು ಅವಕಾಶ ನೀಡಿದರೆ ತಮ್ಮನ್ನು ತಾವು ಸಾಬೀತುಪಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಅದರಂತೆ ಡೀಲ್ ಫೌಂಡೇಶನ್ ಸಂಸ್ಥೆ ವತಿಯಿಂದ ವಿಕಲಚೇತನರು ಮತ್ತು ಮಹಿಳೆಯರು ಸ್ವಾವಲಂಬನೆ ಜೀವನವನ್ನು ಕಟ್ಟಿಕೊಂಡು ಎಲ್ಲರಂತೆ ಸದೃಢ ಭಾವನೆಗಳನ್ನು ಮೈಗೂಡಿಸಿಕೊಂಡು ಸದಾ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಎಲ್ಲ ಕಾರ್ಯಕರ್ತರು ಪ್ರತಿ ತಾಲೂಕಿನಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ತಾಲೂಕಿನಲ್ಲಿ ಲವ್ಲಿವುಡ್ ಆಫೀಸರ್ಸ್ ವಿಕಲಚೇತನರನ್ನು ಗುರುತಿಸಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ಮಾಹಿತಿ ನೀಡಿ ನಂತರ ಆಸಕ್ತಿ ಇರುವ ವಿಕಲಚೇತನರನ್ನು ಒಟ್ಟುಗೂಡಿಸಿ ಸ್ವ ಸಹಾಯ ಸಂಘವನ್ನು ರಚನೆ ಮಾಡಿ ಅಕೌಂಟ್ ಮಾಡಿಸಿ ಆ ಸಂಘದ ಸದಸ್ಯರಲ್ಲಿ 2016ರ ಅವೆರ್ನೆಸ್ ತರಬೇತಿ,ಹೈನುಗಾರಿಕೆ ತರಬೇತಿ,ಕುಂಕುಮ ತರಬೇತಿ, ಮೇಣದಬತ್ತಿ ತರಬೇತಿ, ಕುರಿ ಆಡು ಸಾಕಾಣಿಕೆ ತರಬೇತಿ ಮುಂತಾದ ಗೃಹ ಕೈಗಾರಿಕೆಗಳ ತರಬೇತಿಯನ್ನು ನೀಡಿ ವಿಕಲಚೇತನರು ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗದಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ.

ಜೊತೆಗೆ ಡೀಲ್ ಫೌಂಡೇಶನ್ ಸಂಸ್ಥೆಯ ತರಬೇತಿಗಳು ಅಷ್ಟೇ ಅಲ್ಲದೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಹಾಗೂ ಅನೇಕ ಇಲಾಖೆಗಳಿಂದ ಸಿಗುವ ಸುತ್ತುನಿಧಿ ಮತ್ತು ತರಬೇತಿಗಳನ್ನು ಕೂಡ ಡೀಲ್ ಫೌಂಡೇಶನ್ ಸಂಸ್ಥೆಯ ಸಹಕಾರದಿಂದ ವಿಕಲಚೇತನರಿಗೆ ಲವ್ಲೀ ವುಡ್ ಆಫೀಸರ್ ಸೌಲಭ್ಯಗಳನ್ನು ಕೂಡ ಕೊಡಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಹೇಳುವುದಾದರೆ, ಕೃಷಿ ಇಲಾಖೆಯಿಂದ ವಿಕಲಚೇತನ ಸ್ವಸಹಾಯ ಸಂಘಗಳಿಗೆ ಮತ್ತು ಮಹಿಳೆಯರ ಸ್ವಸಹಾಯ ಸಂಘಗಳಿಗೆ ಸುತ್ತುನಿಧಿ ಎನ್ನುವ ಕಾನ್ಸೆಪ್ಟ್ ಮೂಲಕ ಸಂಘಗಳಿಗೆ ಹಣವನ್ನು ಕೊಡುತ್ತಿದ್ದಾರೆ. ಅದು ಪ್ರತಿ ತಾಲೂಕಿನಿಂದಲೂ ಪ್ರತಿವರ್ಷ ಇಷ್ಟೇ ಸಂಘಗಳು ಎಂದು ಆಯ್ಕೆ ಮಾಡಿ ಆ ಸಂಘಕ್ಕೆ ಹಣವನ್ನು ನೀಡಿ ಸಂಘದ ಸದಸ್ಯರು ಉದ್ಯೋಗಕ್ಕಾಗಿ ಅವಶ್ಯಕತೆ ಇರುವವರು ಸಂಘದಿಂದ ಸಾಲವನ್ನು ಪಡೆದುಕೊಂಡು ಉದ್ಯೋಗ ಮಾಡಬಹುದು. ಇದರಿಂದ ಬಂದ ಇಂಟರೆಸ್ಟ್ ಕೂಡ ಆ ಸಂಘದ ಉಳಿದ ಸದಸ್ಯರಿಗೆ ಹಂಚಿಕೆಯಾಗುತ್ತದೆ.ಇದರಿಂದ ವಿಕಲಚೇತನರಿಗೂ ಅನುಕೂಲವಾಗುತ್ತದೆ.

ಈ ರೀತಿಯಾಗಿ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಲವ್ಲೀ ವುಡ್ ಆಫೀಸರ್ಸ್ ಡೀಲ್ ಫೌಂಡೇಶನ್ ಸಂಸ್ಥೆಯ ಸರಕಾರದಿಂದ ಪ್ರತಿ ತಾಲೂಕಿನಲ್ಲಿ ವಿಕಲಚೇತನರ ಮತ್ತು ಮಹಿಳೆಯರ ಸಂಘಗಳಿಗೆ ಸುತ್ತು ನಿಧಿಯನ್ನು ಕೊಡಿಸುತ್ತಿದ್ದಾರೆ. ಈಗಾಗಲೇ ಮುಂಡರಗಿ ತಾಲೂಕಿನ ಲವ್ಲೀವುಡ್ ಆಫೀಸರ್ ಆದ ರೇಣುಕಾ ಕಲ್ಲಳ್ಳಿ ಇವರು ಡೀಲ್ ಫೌಂಡೇಶನ್ ಸಂಸ್ಥೆಯ ಪ್ರೋಗ್ರಾಮ್ಮುಂ ಮನೆಜೆರ್ ಆದ ಉಮಾ ಚೀಲಗೌಡರ ಇವರ ಸಹಕಾರದಿಂದ ಮುಂಡರಗಿ ತಾಲೂಕಿನ ವಿಕಲಚೇತನ ಮತ್ತು ಮಹಿಳೆಯರ ಸ್ವಸಹಾಯ ಸಂಘಕ್ಕೆ ಕೃಷಿ ಇಲಾಖೆಯಿಂದ ಸುತ್ತುನಿಧಿ ಕೊಡಿಸಿ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುಲು ಸಹಾಯ ಮಾಡಿದ್ದಾರೆ.

ಅದರಂತೆ ಶಿರಹಟ್ಟಿ ತಾಲೂಕಿನಲ್ಲಿ ಈ ವರ್ಷ ಕೃಷಿ ಇಲಾಖೆಯಿಂದ ಸುತ್ತು ನಿಧಿಯನ್ನು ನೀಡಿದ್ದಾರೆ. ಅದು ಶಿರಹಟ್ಟಿ ತಾಲೂಕಿನ ಲವ್ಲಿವುಡ್ ಆಫೀಸರ್ ಮತ್ತು ಉಮಾ ಚಿಲ್ ಗೌಡರ್ ಇವರು ಶಿರಹಟ್ಟಿ ತಾಲೂಕಿನ ಕೃಷಿ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಹೇಳಿ ನಮ್ಮ ವಿಕಲಚೇತನ ಮತ್ತು ಮಹಿಳೆಯರ ಸಂಘಕ್ಕೆ ಸುತ್ತುನಿಧಿ ನೀಡಿ ಅದು ಅವರಿಗೂ ಆರ್ಥಿಕ ಜೀವನಕ್ಕೆ ಸಹಕಾರವಾಗುತ್ತದೆ ಎಂದು ಮನವಿ ಮಾಡಿದಾಗ ಆಗ ಕೃಷಿ ಇಲಾಖೆಯಿಂದ ಕೃಷಿ ತರಬೇತಿಯನ್ನು ಮಾಗಡಿ ಗ್ರಾಮದಲ್ಲಿ ಆಯೋಜಿಸಿದರು. ಅದರಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯಿಂದ ರಚನೆಯಾದ ವಿಕಲಚೇತನ ಮತ್ತು ಮಹಿಳೆಯರ ಒಟ್ಟು ಐದು ಸಂಘಗಳ ಸದಸ್ಯರು ಆ ತರಬೇತಿಗೆ ಭಾಗವಹಿಸಿದ್ದರು. ನಂತರ ಭಾಗವಹಿಸಿದ ಐದು ಸಂಘಗಳಿಗೆ ಪ್ರತಿ ಸಂಘಕ್ಕೂ ಹತ್ತು ಸಾವಿರ ರೂಪಾಯಿಯಂತೆ ಶಿರಹಟ್ಟಿ ತಾಲೂಕಿನ ಡೀಲ್ ಫೌಂಡೇಶನ್ ನ ಸಂಘಗಳಿಗೆ ಒಟ್ಟು 50,000ಗಳನ್ನು ಸುತ್ತು ನಿಧಿಯಾಗಿ ನೀಡಿದರು. ಶಿರಹಟ್ಟಿ ತಾಲೂಕಿನ ಆ 5 ಸಂಘಗಳೆಂದರೆ “ಶ್ರೀ ರಾಮಲಿಂಗೇಶ್ವರ ವಿಕಲಚೇತನರ ಪುರುಷರ ಸ್ವಸಹಾಯ ಸಂಘ” ಮಾಗಡಿ ಈ ಸಂಘಕ್ಕೆ ಸುತ್ತಿ ನಿಧಿ ಬಂದಿದೆ.ಇದರಿಂದ ಸಂಘದ ಸದಸ್ಯರಾದ ಮೊಹಮ್ಮದ್ ರಫೀಕ್ ಎನ್ನುವರು ಕೃಷಿಗಾಗಿ ಹಾಗೂ ಹಾಲಪ್ಪ ಉಪ್ಪಾರ್ ಎನ್ನುವರು ವ್ಯವಸಾಯಕ್ಕಾಗಿ ಲೋನ್ ಪಡೆದುಕೊಂಡು ಉದ್ಯೋಗ ಆರಂಭಿಸಿದ್ದಾರೆ.ಇದರಿಂದ ಅನೇಕ ವಿಕಲಚೇತನಕ್ಕೆ ಮಾದರಿಯಾಗಿದ್ದಾರೆ.

ಅದೇ ರೀತಿ “ಸೇವಾಲಾಲ್ ವಿಕಲಚೇತನರ ಪುರುಷರ ಸ್ವಸಹಾಯ ಸಂಘ”ದವರು ಸುತ್ತು ನಿಧಿಯನ್ನು ಪಡೆದುಕೊಂಡಿದ್ದಾರೆ.ಈ ಸಂಘದ ಸದಸ್ಯರಲ್ಲಿ ಶಂಕ್ರಪ್ಪ ಲಮಾಣಿ ಎನ್ನುವರು ಕಿರಾಣಿ ವ್ಯಾಪಾರಕ್ಕಾಗಿ ಹಾಗೂ ಕವಿತಾ ಲಮಾಣಿ ಎನ್ನುವರು ಬಟ್ಟೆ ವ್ಯಾಪಾರಕ್ಕಾಗಿ ಲೋನ್ ಪಡೆದುಕೊಂಡು ಉದ್ಯೋಗ ಮಾಡುತ್ತ ಅನೇಕ ವಿಕಲಚೇತನರಿಗೆ ಸ್ಪೂರ್ತಿಯಾಗಿದ್ದಾರೆ.

ನಂತರ “ಲಕ್ಷ್ಮೀದೇವಿ ಮಹಿಳಾ ಸ್ವಸಹಾಯ ಸಂಘ” ಹೊಳಲಾಪುರ ಈ ಸಂಘಕ್ಕು ಸುತ್ತುನಿಧಿ ಬಂದಿದ್ದು ಇದರಲ್ಲಿ ಹೇಮಾ ಹಾದಿಮನಿ, ಪವಿತ್ರ ಬಂಡಿ,ರುದ್ರಮ್ಮ ಕುದುರಿ ಎಂಬ ಸದಸ್ಯರು ಕೃಷಿಗಾಗಿ ಸಂಘದಿಂದ ಲೋನ್ ಪಡೆದುಕೊಂಡು ರೈತರಾಗಿ ಉದ್ಯೋಗ ಮಾಡುತ್ತಿದ್ದಾರೆ.

ಹಾಗೂ “ಶ್ರೀ ಮೈಲಾರಲಿಂಗೇಶ್ವರ ವಿಕಲಚೇತನರ ಸ್ವಸಹಾಯ ಸಂಘ” ತಂಗೋಡ ಈ ಸಂಘದ ಸದಸ್ಯರು ಕೂಡ ಸುತ್ತುನಿಧಿ ಯಿಂದ ಲೋನ್ ಪಡೆದುಕೊಂಡು ಜಾಫರ್ ಅಲಿ ಚೌದರಿ ಎಂಬ ಸದಸ್ಯರು ಟೈಲರಿಂಗ್ ಉದ್ಯೋಗ ಮತ್ತು ಕೃಷಿಗಾಗಿ ವೈಯಕ್ತಿಕ ಲೋನ್ ಪಡೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ.

ಹಾಗೂ “ಉಡಚಮ್ಮ ದೇವಿ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ” ಮಾಗಡಿ ಈ ಸಂಘಕ್ಕು ಸುತ್ತುನಿಧಿ ಬಂದಿದ್ದು ಈ ಸಂಘದಿಂದ ಉಷಾ ಎನ್ನುವರು ಕಿರಾಣಿ ವ್ಯಾಪಾರಕ್ಕಾಗಿ ಮತ್ತು ನಂದಾ ನಾಗಾವಿ ಎನ್ನುವರು ಬಟ್ಟೆ ವ್ಯಾಪಾರಕ್ಕಾಗಿ ವೈಯಕ್ತಿಕ ಲೋನ್ ಪಡೆದುಕೊಂಡು ಉದ್ಯೋಗ ಮಾಡುತ್ತ ಮಹಿಳೆಯರು ಕೂಡ ಯಾವುದರಲ್ಲಿ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ.

ಈ ರೀತಿಯಾಗಿ ಐದು ಸಂಘದಿಂದ ಆ ಎಲ್ಲಾ ಸಂಘದ ಸದಸ್ಯರ ಒಪ್ಪಿಗೆಯಿಂದ ಒಮ್ಮೆಲೇ ಎಲ್ಲರೂ ಲೋನ್ ಪಡೆದುಕೊಳ್ಳಲು ಆಗುವುದಿಲ್ಲ ಆ ಸಂಘದ ಸದಸ್ಯರಲ್ಲಿ ಒಮ್ಮತದಿಂದ ಅವಶ್ಯಕತೆ ಇರುವವರು ಮೊದಲು ಲೋನ್ ಪಡೆದುಕೊಂಡು ನಂತರ ಸರದಿಯಾಗಿ ಎಲ್ಲರೂ ಲೋನ್ ಪಡೆದುಕೊಂಡು ಉದ್ಯೋಗದಲ್ಲಿ ಹೆಣ್ಣು ಹೆಚ್ಚಿನ ಮಟ್ಟದಲ್ಲಿ ತೊಡಗೊಣ ಎಂದು ತೀರ್ಮಾನಿಸಿ ಸುತ್ತು ನಿಧಿಯ ಜೊತೆಗೆ ಉಳಿತಾಯವನ್ನು ಜಂಟಿಯಾಗಿ ವೈಯಕ್ತಿಕ ಲೋನ್ ಪಡೆದುಕೊಂಡು ಪ್ರತಿ ಸದಸ್ಯರು ತಮ್ಮ ಆಸಕ್ತಿ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.ಇದರಿಂದ ಅನೇಕ ವಿಕಲಚೇತನರ ಮತ್ತು ಮಹಿಳೆಯರಿಗೆ ಈ ಎಲ್ಲಾ ಸಂಘದ ಸದಸ್ಯರು ಮಾದರಿಯಾಗಿದ್ದಾರೆ. ಹಾಗೂ ಈ ಸಮಾಜಕ್ಕೆ ವಿಕಲಚೇತನರಿಗೆ ಅವಕಾಶ ಸಿಕ್ಕರೆ ಏನನ್ನಾದರೂ ಮಾಡಬಲ್ಲರು ಎಂದು ತೋರಿಸುತ್ತಿದ್ದಾರೆ.

ಇವರ ಈ ಏಲ್ಲಾ ಏಳಿಗೆಗೆ ಡೀಲ್ ಫೌಂಡೇಶನ್ ಸಂಸ್ಥೆಯ ಸಹಕಾರ,ಸ್ಪೂರ್ತಿ ಎಂದು ಹೇಳಬಹುದು.ಜೊತೆಗೆ ಲವ್ಲಿವುಡ್ ಆಫೀಸರ್ ಆದ ರೇಖಾ ಮಡ್ಡಿ ಮತ್ತು ಉಮಾ ಚಿಲ್ ಗೌಡರ್ ಇವರ ಒಂದು ಸಲಹೆಯಿಂದಲೇ ಕೃಷಿ ಇಲಾಖೆಯಿಂದ ಸುತ್ತುನಿಧಿ ಸಿಗುವಂತೆ ಮಾಡಿ ಈ ಎಲ್ಲಾ ಸಂಘದ ಸದಸ್ಯರಿಗೆ ಆರ್ಥಿಕ ಜೀವನಕ್ಕಾಗಿ ಸಹಕಾರಿಯಾಗುವಂತೆ ಮಾಡಿದ್ದಾರೆ.ಈ ರೀತಿಯಾಗಿ ಎಲ್ಲ ವಿಕಲಚೇತನರು ಉದ್ಯೋಗದಲ್ಲಿ ತೊಡಗಿ ಮುಂದೆ ಬರಬೇಕು ಅನೇಕ ವಿಕಲಚೇತನರಿಗೆ ಮಾದರಿಯಾಗಿ ಈ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಆಗಬೇಕು ಎಂಬ ಅಭಿಲಾಷೆ ಡೀಲ್ ಫೌಂಡೇಶನ್ ಸಂಸ್ಥೆ ದಾಗಿದೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿದ್ದರೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation. com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

Get a report of all our on field work every month.

You have Successfully Subscribed!

Share This