ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವ ಸಂಸ್ಥೆಯು ವಿಕಲಚೇತನ ವ್ಯಕ್ತಿಗಳಿಗೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸಲು ಮತ್ತು ಉತ್ತಮ ಶಿಕ್ಷಣ,ಅರಿವು ಮತ್ತು ಅಂತರ್ಗತ ವಾತಾವರಣದ ಮೂಲಕ ವಿಕಲಚೇತನ ವ್ಯಕ್ತಿಗಳ ವಿರುದ್ಧ ತಾರತಮ್ಯಗಳನ್ನು ಕೊನೆಗೊಳಿಸಲು ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಿಕಲಚೇತನರ ಪ್ರಗತಿಗೆ ಅಡ್ಡಿಯಾಗುವ ಎಲ್ಲಾ ಅಡೆತಡೆಗಳನ್ನು ತಡೆದು ಹಾಕಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ವಿಕಲಚೇತನತೆಯನ್ನು ಲೆಕ್ಕಿಸದೆ ಒಟ್ಟಾಗಿ ಕೆಲಸ ಮಾಡಲು ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ತರಬೇತಿಗಳ ಅವಕಾಶಗಳನ್ನು ಸೃಷ್ಟಿಸಿದೆ.ಆ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಪ್ರತಿ ತಾಲೂಕಿನಲ್ಲಿ ವಿಕಲಚೇತನರು ತರಬೇತಿಯನ್ನು ಪಡೆದುಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಿ ಅನೇಕ ವಿಕಲಚೇತನರಿಗೆ ಮಾದರಿಯಾಗಿದ್ದಾರೆ.ಅಂತಹ ವಿಕಲಚೇತನರಲ್ಲಿ ಸಂತೋಷ್ ಹರಕೋಣಿ ಕೂಡ ಒಬ್ಬರು.ಇವರ ಬಗ್ಗೆ ಹೇಳುವುದಾದರೆ ಇವರು ಮೂಲತಃ ದೊಡ್ದುರು ಪಂಚಾಯಿತಿಯ ಎಲ್ಲಾಪುರ ಗ್ರಾಮದವರು.ತಂದೆ ಬಸವನಗೌಡ ತಾಯಿ ಲಲಿತಾ.ಇವರಿಗೆ ಮೂರು ಜನ ಅಣ್ಣತಮ್ಮಂದಿರೊಂದಿಗೆ ಇವರ ಅವಿಭಕ್ತ ಕುಟುಂಬ ಕೂಡಿತ್ತು. ಇವರ ಬಾಲ್ಯದ ಬಗ್ಗೆ ಹೇಳುವುದಾದರೆ ಸಂತೋಷ ಅವರು ತಂದೆ ತಾಯಿಗೆ ಮುದ್ದಿನ ಕೊನೆಯ ಮಗ.ತಂದೆ ತಾಯಿ ಪ್ರೀತಿ ಯೊಂದಿಗೆ ಬೆಳೆದಿದ್ದರು.ಆದರೆ ಇವರ ಆರ್ಥಿಕ ಪರಿಸ್ಥಿತಿ ಬಡತನದಲ್ಲಿದ್ದರು ಪ್ರೀತಿಗೆ ಯಾವ ಕೊರತೆಯೂ ಇರಲಿಲ್ಲ.ಬಡತನ ಪರಿಸ್ಥಿತಿ ಇದ್ದ ಕಾರಣ ಸಂತೋಷ್ ಇವರು ಅವರ ದೊಡ್ಡಮ್ಮನ ಮನೆಯಲ್ಲಿ ಬೆಳೆದು ಇವರು ಶಿಕ್ಷಣವು ಕೂಡ ಅವರ ದೊಡ್ಡಮ್ಮ ಅವರ ಊರಿನಲ್ಲಿ ಆರಂಭವಾಯಿತು.

ಸಂತೋಷ ಅವರು ಹತ್ತನೇ ತರಗತಿಯವರೆಗೆ ಶಿಕ್ಷಣವನ್ನು ಮುಗಿಸಿದರು.ನಂತರ ಅವರಿಗೆ ನಾನು ಹೊರೆ ಆಗಬಾರದು ಜೊತೆಗೆ ಅಪ್ಪ ಅಮ್ಮನಿಗೆ ನಾನು ಸಹಾಯ ಮಾಡಬೇಕು ಎಂದು ಶಿಕ್ಷಣವನ್ನು ಬಿಟ್ಟು ಬೆಂಗಳೂರಿಗೆ ಕೆಲಸಕ್ಕೆ ಹೋದರು.ಬೆಂಗಳೂರಿನಲ್ಲಿ ಬಯೋಕಾನ್ ಕಂಪನಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡಿದರು. ಇದರಿಂದ ಬಂದ ಸಂಬಳದಲ್ಲಿ ತಂದೆ ತಾಯಿಗೆ ಕಳುಹಿಸುತ್ತಿದ್ದರು.ದಿನ ಕಳೆದ ಹಾಗೆ ಇವರ ಕಣ್ಣಿಗೆ ತೊಂದರೆ ಆಗುತ್ತಾ ಹೋಯಿತು ಇವರಿಗೆ ಹುಟ್ಟಿನಿಂದಲೇ ಕಣ್ಣಿನ ದೃಷ್ಟಿ ಕಡಿಮೆ ಪ್ರಮಾಣದ ತೊಂದರೆ ಇತ್ತು.ಕನ್ನಡಕ ಬಳಸದೆ ಇದ್ದ ಕಾರಣ ಈಗ ಕೆಲಸ ಮಾಡುವಾಗ ದೃಷ್ಟಿ ತೊಂದರೆ ಹೆಚ್ಚಾಗುತ್ತಾ ಹೋಯಿತು.ಜೊತೆಗೆ ಕ್ರಮೇಣವಾಗಿ ಕಿವಿ ಕೂಡ ಕೇಳಿಸದೆ ವಿಕಲಚೇತನತೆಯನ್ನು ಹೊಂದಿದರು.ಇದರಿಂದ ಇನ್ನು ಹೆಚ್ಚಿನ ತೊಂದರೆ ಆಗಬಹುದು ಎಂದು ತಿಳಿದು ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿಬಿಟ್ಟರು.

ನಂತರ ಅಲ್ಲಿಂದ ತಮ್ಮ ಯಲ್ಲಾಪುರ ಗ್ರಾಮಕ್ಕೆ ಬಂದರು. ತಂದೆ ತಾಯಿಯೂ ಕೂಡ ಆತಂಕಕ್ಕೋಳಗಾಗಿ ನೀನು ಯಾವುದೇ ಕೆಲಸ ಮಾಡಬೇಡ ನಮ್ಮ ಕಣ್ಣು ಮುಂದೆ ಇರುವ ಅಷ್ಟೇ ಸಾಕು ಎಂದು ಹೇಳಿದರು.ನಂತರ ತಮ್ಮದೇ ಆದ ಹೊಲದಲ್ಲಿ ತಂದೆ ತಾಯಿಗೆ ಸಹಾಯ ಮಾಡುತ್ತಾ ಹೋದರು.ಅಣ್ಣಂದಿರೆಲ್ಲಾ ಕೆಲಸ ಮಾಡುತ್ತಿದ್ದಾರೆ ನಾನು ಕೂಡ ಯಾವುದಾದರೂ ಕೆಲಸ ಮಾಡಬೇಕು ಎಂದು ಚಿಂತೆಗೆ ಒಳಗಾದರು.ಆದರೆ ನನ್ನ ವಿಕಲಚೇತನತೆಯಿಂದ ಯಾರು ಕೆಲಸ ಕೊಡುವುದಿಲ್ಲ ಎಂದು ಚಿಂತಿಸುತ್ತ ದಿನ ಕಳೆದರು.

ಸ್ವಲ್ಪ ದಿನಗಳ ನಂತರ ಡೀಲ್ ಫೌಂಡೇಶನ್ ಸಂಸ್ಥೆಯ ಲಕ್ಷ್ಮೇಶ್ವರ ತಾಲೂಕಿನ ಲವ್ಲೀ ವುಡ್ ಆಫೀಸರ್ ಆದ ದೀಪ ಗೋಕಾವಿಯವರು ದೊಡ್ದುರು ಪಂಚಾಯತಿಗೆ ಭೇಟಿ ನೀಡಿ ಅಲ್ಲಿ ವಿಕಲಚೇತನರಾಗಿ ಕಾರ್ಯ ನಿರ್ವಹಿಸುತ್ತಿರುವ ವಿ ಆರ್ ಡಬ್ಲ್ಯೂ ಅವರನ್ನು ಭೇಟಿ ಮಾಡಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.ಆಗ ಅವರು ವಿಕಲಚೇತನರಿಗೆ ತರಬೇತಿ ನೀಡಿ ಅವರ ಆರ್ಥಿಕ ಜೀವನಕ್ಕೆ ಸಹಾಯವಾಗುತ್ತದೆ ಎನ್ನುವುದಾದರೆ ಸ್ವಸಹಾಯ ಸಂಘವನ್ನು ರಚಿಸಿ ಎಂದು ತಮ್ಮ ಪಂಚಾಯಿತಿಗೆ ಬರುವ ಹಳ್ಳಿಗಳ ವಿಕಲಚೇತನರ ಮಾಹಿತಿಯನ್ನು ದೀಪ ಅವರಿಗೆ ನೀಡಿದರು.ಅದರಂತೆ ದೀಪ ಅವರು ವಿಕಲಚೇತನರ ಪ್ರತಿ ಮನೆಮನೆಗೂ ಭೇಟಿ ನೀಡಿ ಮಾಹಿತಿಯನ್ನು ನೀಡಿದರು.ನಂತರ ಮಾಹಿತಿ ನೀಡಿದ ಎಲ್ಲಾ ವಿಕಲಚೇತನರನ್ನು ಒಂದು ಕಡೆ ಸೇರಿಸಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ, ಸ್ವಸಹಾಯ ಸಂಘಗಳ ಬಗ್ಗೆ, ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು.ಆಗ ಅಲ್ಲಿನ ವಿಕಲಚೇತನರು ಎಲ್ಲರೂ ಒಟ್ಟುಗುಡಿ ಸ್ವಸಹಾಯ ಸಂಘ ಮಾಡಿ ನಾವು ತರಬೇತಿಗಳನ್ನು ಪಡೆದುಕೊಂಡು ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತೇವೆ ಎಂದು ಎಲ್ಲರೂ ಒಪ್ಪಿ 12 ಜನ ವಿಕಲಚೇತನರು ಸೇರಿ ಸ್ವ ಸಹಾಯ ಸಂಘವನ್ನು ರಚಿಸಿದರು. ಅದರಲ್ಲಿ ಸಂತೋಷ ಕೂಡ ಒಬ್ಬರು.

ಸಂತೋಷ ಅವರು ವಿಕಲಚೇತನರ ಸ್ವಸಹಾಯ ಸಂಘ ರಚಿಸಲು ದೀಪ ಅವರಿಗೆ ಹೆಚ್ಚಿನ ಸಹಕಾರ ಮಾಡಿ ಎಲ್ಲ ವಿಕಲ ಚೇತನರ ದಾಖಲಾತಿಯನ್ನು ಹೊಂದಿಸಿ ಆ ಸಂಘಕ್ಕೆ “ಶ್ರೀ ಆಂಜನೇಯ ವಿಕಲಚೇತನ ಸ್ವ ಸಹಾಯ ಸಂಘ” ಎಂದು ಹೆಸರಿಟ್ಟು ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರು.ಎಲ್ಲರೂ ಪ್ರತಿ ತಿಂಗಳು ನೂರು ರೂಪಾಯಿ ಉಳಿತಾಯವನ್ನು ತುಂಬುತ್ತಿದ್ದಾರೆ. ಈ ಸಂಘದಿಂದ ಸಂತೋಷ ಅವರಿಗೆ ಸ್ವ ಸಹಾಯ ಸಂಘ ಅಂದರೆ ಏನು,ಸಂಘದಿಂದ ಸಿಗುವ ಉಪಯೋಗ ಮತ್ತು ಮಾಹಿತಿಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡರು.

ನಂತರ ಈ ಸಂಘಕ್ಕೆ ದೀಪಾ ಅವರು ಬುಕ್ ರೈಟಿಂಗ್ ತರಬೇತಿ, 2016ರ ಡಿಸೆಬಲಿಟಿ ಅವೆರ್ನೆಸ್ ತರಬೇತಿ,ಲೀಡರ್ಷಿಪ್ ತರಬೇತಿಯನ್ನು ನೀಡಿದರು. ಮೊದಲು ಸಂತೋಷ ಅವರು ಹೆಚ್ಚು ಜನರೊಂದಿಗೆ ಬೆರೆತವರಲ್ಲ ಮತ್ತು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ಅವರಿಗೆ ಇರಲಿಲ್ಲ ಆದರೆ ಈ ಸಂಘ ರಚನೆಯಾದ ನಂತರ ಮತ್ತು ದೀಪಾ ಅವರ ಸಹಕಾರದಿಂದ ಹೆಚ್ಚು ಜನರೊಂದಿಗೆ ಬೇರೆಯಲು ಕಲಿತರು.ನಂತರ ಡೀಲ್ ಫೌಂಡೇಶನ್ ಸಂಸ್ಥೆಯ ಸಹಕಾರದಿಂದ ದೀಪಾ ಅವರು ವಿಕಲಚೇತನರಿಗಾಗಿ ಕೆಲಸ ಮಾಡುತ್ತಿರುವ ಯೂಥ್ ಫಾರ್ ಜಾಬ್ ನಲ್ಲಿ ಒಂದು ತಿಂಗಳ ತರಬೇತಿಗೆ ಸಂತೋಷ ಅವರನ್ನು ಕಳಿಸಿದರು.ಅದರಂತೆ ತರಬೇತಿಯ ನಂತರ ಸಂತೋಷ್ ಅವರನ್ನು ಹಾಸ್ಟೆಲ್ ವಾರ್ಡನ್ನ ಅಟೆಂಡರ್ ಆಗಿ ಕೆಲಸಕ್ಕೆ ಸೇರಿಸಿದರು. ಸಂತೋಷ ಅವರು ಜೀವನದ ಬಗ್ಗೆ ಯೋಚಿಸುತ್ತಾ ಕುಳಿತಾಗ ಈ ಕೆಲಸ ಅವರಿಗೆ ವರವಾಗಿ ಸಿಕ್ಕಿತು.ಈಗ ಡೀಲ್ ಫೌಂಡೇಶನ್ ವತಿಯಿಂದ ಸಂಘ ಮಾಡಿ ತರಬೇತಿ ಪಡೆದುಕೊಂಡು ನಂತರ ಅವರಿಗೆ ಕೆಲಸ ಸಿಕ್ಕಿದೆ.ಜೊತೆಗೆ ಅವರ ಆರ್ಥಿಕ ಜೀವನಕ್ಕೆ ಸಹಾಯ ವಾಗಿದೆ.ಹಾಗೆ ಮುಂದೆ ಈ ಸಂಘದಿಂದ ಬ್ಯಾಂಕ್ ಲೋನ್ ಪಡೆದುಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಬೇಕು ಎಂಬ ಅಭಿಲಾಷೆ ಸಂತೋಷ ಅವರು ಹೊಂದಿದ್ದಾರೆ.

ಜೀವನದಲ್ಲಿ ಮುಂದೆ ಏನು ಅಂತ ಯೋಚಿಸುತ್ತ ಕುಳಿತಾಗ ಡೀಲ್ ಫೌಂಡೇಶನ್ ಸಂಸ್ಥೆಯಿಂದ ದೀಪ ಅವರು ಬಂದು ಬೆಳಕಾದರು. ಈ ಸಂಸ್ಥೆಯ ಬಗ್ಗೆ ಸಂತೋಷ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಅದು ಮೊದಲು ನನಗೆ ಬೇರೆಯವರೊಂದಿಗೆ ಬೆರೆಯುವುದು ಹೇಗೆ ಎಂದು ಗೊತ್ತಿರಲಿಲ್ಲ ಹೆಚ್ಚಾಗಿ ಭಯವಾಗುತ್ತಿತ್ತು.ಜೊತೆಗೆ ನನ್ನ ವಿಕಲಚೇತನತೆ ಇನ್ನು ಹೆಚ್ಚಾಗಿ ನನ್ನನ್ನು ಕುಗ್ಗಿಸಿತ್ತು.ಅದೇ ಸಮಯಕ್ಕೆ ದೀಪಾ ಅವರು ವಿಕಲಚೇತನರಿಗಾಗಿ ಕಾರ್ಯನಿರ್ವಹಿಸುತ್ತಿರುವ ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ಹೇಳಿದಾಗ ನನ್ನ ಜೀವನಕ್ಕೆ ಭರವಸೆ ಬಂದಂತಾಯಿತು.ಜೊತೆಗೆ ಸ್ವಸಹಾಯ ಸಂಘ ಮಾಡಿ ವಿಕಲಚೇತನರಿಗೆ ಸಿಗುವ ಸರ್ಕಾರದ ಸೌಲಭ್ಯಗಳ ಬಗ್ಗೆ ಮತ್ತು ಡೀಲ್ ಫೌಂಡೇಶನ್ ಸಂಸ್ಥೆಯ ತರಬೇತಿಗಳ ಬಗ್ಗೆ ಹೆಚ್ಚಾಗಿ ಮಾಹಿತಿ ಪಡೆದುಕೊಂಡಿದ್ದರಿಂದ ನನ್ನ ಜೀವನಕ್ಕೆ ಸಹಾಯಕವಾಯಿತು. ಹಾಗೆ ನನ್ನ ಕುಟುಂಬಕ್ಕೆ ನಾನು ಹೊರೆಯಾಗುತ್ತಿದ್ದೇನೆ ಎಂದು ಚಿಂತಿಸುವಾಗ ದೀಪಾ ಅವರು ತರಬೇತಿಯನ್ನು ನೀಡಿ ಯೂಥ್ ಫಾರ್ ಜಾಬ್ ನಲ್ಲಿ ಕೆಲಸ ಕೊಡಿಸಿ ವಿಕಲಚೇತನರಿಗೂ ಅವಕಾಶ ಕೊಟ್ಟರೆ ಯಾವುದೆ ಕೆಲಸವಾದರೂ ಮಾಡುತ್ತೇವೆ ಎಂದು ಸಾಬೀತುಪಡಿಸಲು ನಮಗೆ ಸ್ಪೂರ್ತಿ ನೀಡಿದರು.ಇದೇ ರೀತಿ ಇನ್ನು ಹೆಚ್ಚಿನ ಸಹಕಾರ ವಿಕಲಚೇತನರಿಗೆ ಡೀಲ್ ಫೌಂಡೇಶನ್ ಸಂಸ್ಥೆಯು ಯಾವಾಗ ನೀಡಲಿ ಮತ್ತು ನಮ್ಮಂತಹ ವಿಕಲಚೇತನರಿಗೆ ಈ ಸ್ವ ಸಹಾಯ ಸಂಘಗಳ ಮೂಲಕ ಹಿಂದೆ ಉಳಿದಿರುವ ನನ್ನಂಥಹ ಎಷ್ಟು ವಿಕಲಚೇತನರನ್ನು ಬೆಳಕಿಗೆ ತಂದು ಅವಕಾಶವನ್ನು ನೀಡಿ ಅವರ ಕುಟುಂಬಕ್ಕೆ ಸಹಕಾರ ಆಗುವಂತೆ ಮಾಡಲಿ ಎಂದು ಕೇಳುತ್ತಾ ಇಷ್ಟೆಲ್ಲ ಸಹಕಾರ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೂ ಮತ್ತು ದೀಪಾ ಅವರಿಗೂ ನನ್ನ ಪರವಾಗಿ ಹಾಗೂ ನನ್ನ ಕುಟುಂಬದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹೀಗೆ ಇನ್ನೂ ಸಹಕಾರ ನೀಡಿಲಿ ಮತ್ತು ನಾವು ಯಾವಾಗಲೂ ಡೀಲ್ ಫೌಂಡೇಶನ್ ಸಂಸ್ಥೆಯ ಜೊತೆಗೆ ಇರುತ್ತೇವೆ ಎಂದು ಆಶಿಸುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ರೀತಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗಾಗಿ ಶ್ರಮ ವಹಿಸುತ್ತಾ ವಿಕಲಚೇತನರ ಜೀವನಕ್ಕೆ ಆರ್ಥಿಕವಾಗಿ ಸಹಾಯ ಮಾಡಿ ತರಬೇತಿಗಳನ್ನು ನೀಡಿ ಉದ್ದೋಗದಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ.ಇದರಿಂದ ಪ್ರತಿ ತಾಲೂಕಿನಲ್ಲಿ ಅನೇಕ ವಿಕಲಚೇತನರು ಉದ್ಯೋಗದಲ್ಲಿ ತೊಡಗಿದ್ದಾರೆ.ಇದೇ ರೀತಿ ಡೀಲ್ ಫೌಂಡೇಶನ್ ಸಂಸ್ಥೆ ಇನ್ನು ಹೆಚ್ಚಿನ ಕೀರ್ತಿಗಳಿಸುತ್ತಾ ಬೆಳೆಯಲಿ ಎಂದು ಎಲ್ಲಾ ವಿಕಲಚೇತನರು ಆಶಿಸುತಿದ್ದಾರೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.deal-foundation.com ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

 

Get a report of all our on field work every month.

You have Successfully Subscribed!

Share This