ಸಾಮಾಜಿಕ ಮತ್ತು ಆರ್ಥಿಕ ಪುನರ್ವಸತಿ,ಚೇತರಿಕೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಕಾರಣವಾಗುವ ಪರಿಣಾಮಕಾರಿ ಪ್ರಕ್ರಿಯೆಯನ್ನು ವಿಮೆ ಮಾಡಲು ಡೀಲ್ ಫೌಂಡೇಶನ್ ಸಂಸ್ಥೆಯು ಆಸಕ್ತಿ ಮತ್ತು ಸ್ಥಳದ ಸಮುದಾಯಗಳಾದ್ಯಂತ ಕೆಲಸ ಮಾಡುತ್ತಿದೆ.ಗ್ರಾಮೀಣ ಪ್ರದೇಶಗಳಲ್ಲಿನ ವಿಕಲಚೇತನರ ಸಮುದಾಯಗಳನ್ನು ನಿಜವಾದ ಸ್ವಾವಲಂಬಿಗಳನ್ನಾಗಿ ಮಾಡಲು ಸಮುದಾಯದ ಒಡೆತನವು ಒಂದು ಮಾರ್ಗವಾಗಿದೆ.ವಿಕಲಚೇತನತೆ ಮತ್ತು ಸ್ವಸಹಾಯ ಗುಂಪುಗಳನ್ನು ಹೊಂದಿರುವ ಸಶಕ್ತ ಮತ್ತು ಪ್ರೇರಿತ ವ್ಯಕ್ತಿಗಳನ್ನು ರಚಿಸುವ ಮೂಲಕ ಒಬ್ಬರು ಪ್ರಾರಂಭಿಸಬೇಕು ಮತ್ತು ಅವರು ಪ್ರಾರಂಭಿಸಿದ ಜೀವನೋಪಾಯ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಚಟುವಟಿಕೆಗಳ ಉಸ್ತುವಾರಿಯನ್ನು ವಹಿಸಿಕೊಳ್ಳಬೇಕು ಅಂದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ಡೀಲ್ ಫೌಂಡೇಶನ್ ಸಂಸ್ಥೆಯು ಪ್ರತಿ ಮಹಿಳೆಯರು ಮತ್ತು ವಿಕಲಚೇತನರಲ್ಲಿ ಮನಮುಟ್ಟುವಂತೆ ಕಾರ್ಯನಿರ್ವಹಿಸುತ್ತಿದೆ.

ಅದರಂತೆ ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಇನ್ನೂ ಹೆಚ್ಚಿನ ಉದ್ಯೋಗದ ಅವಕಾಶಗಳನ್ನು ನೀಡಲು ಪ್ರತಿ ತಾಲೂಕಿನಲ್ಲಿ ಲವ್ಲೀ ವುಡ್ ಆಫೀಸರ್ ಕಾರ್ಯನಿರ್ವಹಿಸುತ್ತಿದ್ದಾರೆ.ಲವ್ಲಿ ವುಡ್ ಆಫೀಸಸ್ ಪ್ರತಿ ತಾಲೂಕಿನಲ್ಲಿ ವಿಕಲಚೇತನ ಮತ್ತು ಮಹಿಳೆಯರನ್ನು ಒಟ್ಟುಗೂಡಿಸಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡುತ್ತಿದ್ದಾರೆ. ಇದರಿಂದ ಪ್ರೇರಿತಗೊಂಡು ವಿಕಲಚೇತನರು ಮತ್ತು ಮಹಿಳೆಯರು ಸ್ವ ಸಹಾಯ ಸಂಘವನ್ನು ರಚಿಸಿಕೊಂಡು ಡೀಲ್ ಫೌಂಡೇಶನ್ ವತಿಯಿಂದ ಎರೆಹುಳ ಗೊಬ್ಬರ ತಯಾರಿಕೆ,ಜೇನು ಸಾಕಾಣಿಕೆ ತರಬೇತಿ,ಕುರಿ,ಆಡು ಸಾಕಾಣಿಕೆ ತರಬೇತಿ,ಮೇಣಬತ್ತಿ ತಯಾರಿಕೆ ತರಬೇತಿ,ಕುಂಕುಮ ತರಬೇತಿ ಮುಂತಾದ ತರಬೇತಿಗಳನ್ನು ನೀಡಿ ವಿಕಲಚೇತನರು ಮತ್ತು ಮಹಿಳೆಯರು ಉದ್ಯೋಗದಲ್ಲಿ ತೊಡಗುವಂತೆ ಲವ್ಲೀ ವುಡ್ ಆಫೀಸರ್ಸ್ ಮಾಡುತ್ತಿದ್ದಾರೆ.

ಅದೇ ರೀತಿ ಮುಂಡರಗಿ ತಾಲೂಕಿನ ಲವ್ಲೀ ವುಡ್ ಆಫೀಸರ್ ಆದ ರೇಣುಕಾ ಕಲ್ಲಳ್ಳಿ ಇವರು ಮೊದಲು ಮೇವುಂಡಿ ಗ್ರಾಮದಲ್ಲಿನ ಮಹಿಳೆಯರನ್ನು ಒಟ್ಟುಗೂಡಿಸಿ ಅವರಿಗೆ ಡೀಲ್ ಫೌಂಡೇಶನ್ ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು.ನಂತರ ಸ್ವಸಹಾಯ ಸಂಘ ಅಂದರೆ ಏನು? ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.ಆಗ ಅಲ್ಲಿನ ಮಹಿಳೆಯರು ಒಪ್ಪಿಕೊಂಡು ಮೊದಲು ಆರು ಜನರು ಸೇರಿ ಜಂಟಿ ಬಾಧ್ಯತೆ ಗುಂಪನ್ನು ರಚಿಸಿದರು. ಜಂಟಿ ಬಾಧ್ಯತೆ ಗುಂಪು ಎಂದರೆ ಒಂದರಿಂದ ಆರು ಜನರು ಹೊಂದಿರುವ ಗುಂಪಿಗೆ ಜಂಟಿ ಬಾಧ್ಯತೆ ಗುಂಪು ಎಂದು ಕರೆಯುತ್ತಾರೆ.

ನಂತರ ಈ ಸಂಘಕ್ಕೆ “ಆದಿಶಕ್ತಿ ಮಹಿಳಾ ಜಂಟಿ ಬಾಧ್ಯತೆ ಗುಂಪು” ಎಂದು ಹೆಸರಿಟ್ಟು ಮೇವುಂಡಿ ಗ್ರಾಮದ ಕೆವಿಜಿ ಬ್ಯಾಂಕ್ ನಲ್ಲಿ ಅಕೌಂಟ್ ಮಾಡಿಸಿ ಪ್ರತಿ ತಿಂಗಳು 100 ರೂಪಾಯಿ ಉಳಿತಾಯವನ್ನು ತುಂಬುತ್ತಿದ್ದಾರೆ.ಹೀಗೆ ಈ ಸಂಘಕ್ಕೆ 2016ರ ಡಿಸೆಬಿಲಿಟಿ ಅವೆನೆಸ್ ತರಬೇತಿ,ಬುಕ್ ರೈಟಿಂಗ್ ತರಬೇತಿ, ಲೀಡರ್ಶಿಪ್ ತರಬೇತಿ ನೀಡಿ ಬುಕ್ ಬರೆವುದು ಹೇಗೆ ಎಂಬ ಎಲ್ಲ ಮಾಹಿತಿಯನ್ನು ಸದಸ್ಯರಿಗೆ ರೇಣುಕಾ ಅವರು ನೀಡಿದರು.ಹೀಗೆ ಮುಂದುವರೆಯುತ್ತ ಆರು ತಿಂಗಳು ಆದ ನಂತರ ಇವರಿಗೆ ಉದ್ಯೋಗದ ತರಬೇತಿಯನ್ನು ಕೂಡ ನೀಡಿದರು. ಅದರಲ್ಲಿ ಪೇಪರ್ ಬ್ಯಾಗ್ ತರಬೇತಿ, ಮೇಣದಬತ್ತಿ ತರಬೇತಿ,ಕುಂಕುಮ ತರಬೇತಿ ಮುಂತಾದ ತರಬೇತಿಗಳನ್ನು ರೇಣುಕಾ ಅವರು ನೀಡಿದರು.ನಂತರ ಆಸಕ್ತಿ ಹೊಂದಿದ ಉದ್ಯೋಗ ಮಾಡಲು ಪ್ರತಿ ತಿಂಗಳ ಮೀಟಿಂಗ್ ನಲ್ಲಿ ಸದಸ್ಯರು ಚರ್ಚೆ ಮಾಡಿದರು. ಉದ್ಯೋಗ ಮಾಡಲು ಬಂಡವಾಳ ಬೇಕು ಅದಕ್ಕಾಗಿ ಬ್ಯಾಂಕ್ ನಲ್ಲಿ ಲೋನ್ ಪಡೆದುಕೊಳ್ಳಲು ಸದಸ್ಯರು ತೀರ್ಮಾನಿಸಿದರು.

ಪ್ರತಿ ತಿಂಗಳ ಮೀಟಿಂಗ್ ನಲ್ಲಿ ಎಲ್ಲ ಸದಸ್ಯರ ಡಾಕ್ಯುಮೆಂಟ್ ಹೊಂದಿಸಿ ಸದಸ್ಯರೆಲ್ಲರೂ ಎಷ್ಟು ಸಾಲ ತೆಗೆದುಕೊಳ್ಳುತ್ತಾರೆ ಎಂದು ತೀರ್ಮಾನಿಸಿ ಬ್ಯಾಂಕ್ ಅರ್ಜಿ ಫಾರ್ಮ್ ನೊಂದಿಗೆ ರೇಣುಕಾ ಅವರು ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಿದರು.ಇವರ ಉಳಿತಾಯ ಮತ್ತು ನಡವಳಿಕೆ ಪುಸ್ತಕವನ್ನು ಗಮನಿಸಿ ಈ ಸಂಘಕ್ಕೆ ಮೊದಲು 2 ಲಕ್ಷ ರೂಪಾಯಿ ಲೋನ್ ಸ್ಯಾಂಕ್ಷನ್ ಆಯ್ತು.ಅದರಂತೆ ಸದಸ್ಯರೆಲ್ಲರೂ ಲೋನ್ ಪಡೆದುಕೊಂಡರು. ಅದರಲ್ಲಿ ಗಂಗಮ್ಮ ಶಾಂತಗಿರಿ ಇವರು ಹೈನುಗಾರಿಕೆ ಉದ್ಯೋಗದಲ್ಲಿ ಆಸಕ್ತಿ ಇರುವ ಕಾರಣ ಮನೆಯವರ ಸಹಾಯದೊಂದಿಗೆ 35,000 ಲೋನ್ ಪಡೆದುಕೊಂಡು ಹೈನುಗಾರಿಕೆ ಉದ್ಯೋಗ ಮಾಡುತ್ತಿದ್ದಾರೆ.ಅದೇ ರೀತಿ ಶಾರಾಭಿ ನದಾಫ್ ಇವರು ಕೃಷಿಗಾಗಿ 30,000/- ಲೋನ್ ಪಡೆದುಕೊಂಡು ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.ಹಾಗೆ ಹಂಪವ್ವ ಹಾಲೂರ ಇವರು ಕೂಡ ಹೈನುಗಾರಿಕೆ ಉದ್ಯೋಗಕ್ಕಾಗಿ 30,000/- ಲೋನ್ ಪಡೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ.ಹಾಗೆ ಸುಶೀಲವ್ವ ಮೇಗೂರ ಇವರು ಕೂಡ ಕೃಷಿಗೆ ಬೇಕಾದ ಯಂತ್ರೋಪಕರಣ ತೆಗೆದುಕೊಳ್ಳಲು 20,000/- ಲೋನ್ ಪಡೆದುಕೊಂಡಿದ್ದಾರೆ. ಹಾಗೂ ಸುಧಾ ಬಸವನಗೌಡ್ರು ಇವರು ಕುರಿ-ಆಡು ಸಾಕಾಣಿಕೆಗಾಗಿ 35,000/- ಲೋನ್ ಪಡೆದುಕೊಂಡು ಉದ್ಯೋಗ ಮಾಡುತ್ತಿದ್ದಾರೆ.ಹಾಗೆ ಶೇಕವ್ವ ರಗುನಾಥಳ್ಳಿ ಇವರು ಕೂಡ ಕೃಷಿಗಾಗಿ 50,000/- ಲೋನ್ ಪಡೆದುಕೊಂಡು ವ್ಯವಸಾಯ ಮಾಡುತ್ತಿದ್ದಾರೆ.ಪ್ರತಿಯೊಬ್ಬ ಹೆಣ್ಣು ಮಕ್ಕಳು ಭೂಮಿ ತಾಯಿಯನ್ನು ನಂಬಿ ಕೃಷಿಗಾಗಿ ಲೋನ್ ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿದ್ದಾರೆ.

ಹೀಗೆ ಎರಡು ವರ್ಷ ಕಳೆದ ನಂತರ ಈ ಸಂಘದ ಸದಸ್ಯರೆಲ್ಲರೂ ಯಾವುದೇ ಕಟ್ಟು ಬಾಕಿ ಉಳಿಸದೆ ಬ್ಯಾಂಕ್ ಲೋನ್ ಮುಟ್ಟಿಸಿದರು. ಅಷ್ಟೇ ಅಲ್ಲದೆ ಈ ಸಂಘದ ಸದಸ್ಯರಾದ ಗಂಗಮ್ಮ ಶಾಂತಗಿರಿ ಇವರು ಡೀಲ್ ಫೌಂಡೇಶನ್ ವತಿಯಿಂದ ಹತ್ತು ದಿನದ ಟೈಲರಿಂಗ್ ತರಬೇತಿಗೆ ಗದಗ ಕೃಷಿ ವಿಸ್ತರಣ ಕೇಂದ್ರದಲ್ಲಿ ಭಾಗವಹಿಸಿ ತರಬೇತಿ ಪಡೆದುಕೊಂಡು ಟೈಲರಿಂಗ್ ಮಷೀನ್ ಪಡೆದುಕೊಂಡಿದ್ದಾರೆ.ಈಗ ಮನೆಯಲ್ಲಿಯೇ ಟೈಲರಿಂಗ್ ಉದ್ಯೋಗವನ್ನು ಗಂಗಮ್ಮ ಅವರು ಮಾಡುತ್ತಿದ್ದಾರೆ.ಈ ರೀತಿಯಾಗಿ ಡೀಲ್ ಫೌಂಡೇಶನ್ ವತಿಯಿಂದ ಸಂಘದ ಮಹಿಳೆಯರಿಗೆ ಅನುಕೂಲವಾಗಿದೆ.

ಅಷ್ಟೇ ಅಲ್ಲದೆ ಮೇವುಂಡಿ ಗ್ರಾಮದಲ್ಲಿರುವ ಡೀಲ್ ಫೌಂಡೇಶನ್ ವತಿಯಿಂದ ಸ್ಥಾಪಿತವಾದ ಕೋ ಆಪರೇಟಿವ್ ಸೊಸೈಟಿಯಲ್ಲಿ 60,000 ಬ್ಯಾಂಕ್ ಲೋನ್ ಪಡೆದುಕೊಂಡು ಹೈನುಗಾರಿಕೆಗೆ,ಕೃಷಿಗೆ,ಕುರಿ-ಆಡು ಸಾಕಾಣಿಕೆಗೆ ಲೋನ್ ಪಡೆದುಕೊಂಡು ಉದ್ಯೋಗದಲ್ಲಿ ಮುಂದುವರಿಸಿದ್ದಾರೆ.ಈ ಸಂಘದ ಮಹಿಳೆಯರು ಅನೇಕ ಮಹಿಳಾ ಸ್ವಸಹಾಯ ಸಂಘಗಳಿಗೆ ಮಾದರಿಯಾಗಿದ್ದಾರೆ.

ಹೀಗೆ ಮಾದರಿಯಾಗಿ ನಿಂತಿರುವ ಸಂಘದ ಸದಸ್ಯರು ಡೀಲ್ ಫೌಂಡೇಶನ್ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಅದು ಈ ಸಂಸ್ಥೆಯ ಬಗ್ಗೆ ಮೊದಲು ರೇಣುಕಾ ಅವರು ಹೇಳಿದಾಗ ವಿಕಲಚೇತನರಿಗಾಗಿ ಮತ್ತು ಮಹಿಳೆಯರಿಗಾಗಿ ಕಾರ್ಯನಿರ್ವಹಿಸಲು ಹುಟ್ಟಿರುವ ಈ ಸಂಸ್ಥೆಯ ಬಗ್ಗೆ ಹೆಮ್ಮೆ ಅನಿಸುತ್ತೆ. ಮತ್ತು ಈ ಸಂಸ್ಥೆಯಿಂದಲೇ ರೇಣುಕಾ ಅವರ ಸಹಕಾರದೊಂದಿಗೆ ಜಂಟಿ ಬಾಧ್ಯತೆಯ ಗುಂಪನ್ನು ರಚಿಸಿ ಮಹಿಳೆಯರಿಗೆ ಸಿಗುವ ಅನುಕೂಲಗಳನ್ನು ಮತ್ತು ವಿಕಲಚೇತನ ಮಕ್ಕಳಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಪಡೆದುಕೊಂಡು ಸರ್ಕಾರದಿಂದ ಸೌಲಭ್ಯಗಳನ್ನು ಕೂಡ ಪಡೆದುಕೊಂಡೆವು. ಅಷ್ಟ್ಟೇ ಅಲ್ಲದೆ ನಾವು ಹೊರಗಡೆ ಸಾಲ ತೆಗೆದುಕೊಳ್ಳಲು ಏನಾದರೂ ಒಂದು ಪತ್ರ ಇಟ್ಟು ಸಾಲ ಪಡೆಯಬೇಕು ಅದಕ್ಕೆ ನೂರಾರು ಪ್ರಶ್ನೆ ಮತ್ತು ಕರಾರುಗಳು ಆದರೆ ಈ ಸಂಘದಿಂದ ಯಾವುದೇ ಕಷ್ಟವಿಲ್ಲದೆ ನಮ್ಮ ಸಂಘದ ಮೇಲೆ ಭರವಸೆ ಇಟ್ಟು ಸಾಲವನ್ನು ಕೊಡುತ್ತಾರೆ.ಅದರಿಂದ ಸಾಲ ಪಡೆದುಕೊಂಡು ಉದ್ಯೋಗದಲ್ಲಿ ತೊಡಗುವಂತೆ ಮಾಡಿದ್ದಾರೆ.ಹಾಗೆ ಇದರಿಂದ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯು ಕೂಡ ಸುಧಾರಿಸಿದೆ.ಹೀಗೆ ಇನ್ನೂ ಹೆಚ್ಚಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ನಮ್ಮಂತಹ ಮಹಿಳೆಯರಿಗೆ ಮತ್ತು ವಿಕಲಚೇತನರಿಗೆ ಸಹಕಾರ ನೀಡಿ ಹೆಚ್ಚಿನ ಮಟ್ಟದಲ್ಲಿ ಹೆಸರು ಮಾಡಲಿ.ಹೀಗೆ ನಮಗೆ ಅವಕಾಶ ನೀಡಿದ ಡೀಲ್ ಫೌಂಡೇಶನ್ ಸಂಸ್ಥೆಗೆ ಹಾಗೂ ರೇಣುಕಾ ಅವರಿಗೂ ನಮ್ಮ ಸಂಘದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಹೀಗೆ ಯಾವಾಗಲು ಡೀಲ್ ಫೌಂಡೇಶನ್ ಸಂಸ್ಥೆಗೆ ನಮ್ಮ ಸಹಕಾರ ಇರುತ್ತದೆ ಎಂದು ತಮ್ಮ ಆಶೀರ್ವಾದದೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ರೀತಿಯಾಗಿ ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ಮತ್ತು ಮಹಿಳೆಯರಿಗಾಗಿ ಪ್ರತಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಬೆನ್ನೆಲುಬಾಗಿ ನಿಂತಿದೆ.

ಈ ಬ್ಲಾಗ್ ಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿಗೆ ಅಥವಾ ಯಾವುದೇ ಸಹಾಯಕ್ಕಾಗಿ Info@deal-foundation.com ನಲ್ಲಿ ತಿಳಿಸಿರಿ ಮತ್ತು ನಾವು ಮಾಡುವ ಕೆಲಸದ ಕುರಿತು ಇನ್ನಷ್ಟ್ಟು ತಿಳಿದುಕೊಳ್ಳಲು www.deal-foundation.com ಗೆ ಲಾಗ್ ಇನ್ ಮಾಡಿ.

ಧನ್ಯವಾದಗಳು

 

Get a report of all our on field work every month.

You have Successfully Subscribed!

Share This