Select Page

ಡಿಸೆಂಬರ್ 2021 ರ ಕಾರ್ಯ ಚಟುವಟಿಕೆಗಳ ಸಾಧನೆ

ಜೆ ಎಲ್ ಜಿ ಗುಂಪುಗಳ ಬ್ಯಾಂಕ್ ಖಾತೆ ತೆರೆಯುವಿಕೆ

ತಿಂಗಳಲ್ಲಿ ಡಂಬಳ ಮತ್ತು ಮೇವುಂಡಿ ಗ್ರಾಮಗಳಲ್ಲಿ ಕ್ರಮವಾಗಿ ಉಡಚಮ್ಮದೇವಿ ಮತ್ತು ಲಕ್ಷ್ಮೀದೇವಿ ಜಂಟಿ ಬಾಧ್ಯತೆ ಗುಂಪುಗಳಿಗೆ ಹೊಸ ಗುಂಪು ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು.

ಸಾಮರ್ಥ್ಯ ಬಲವರ್ಧನೆ ತರಬೇತಿ

ನಾವು ಗದಗ ಜಿಲ್ಲಾ ಮೇವುಂಡಿ ಗ್ರಾಮದಲ್ಲಿ ಆದಿಶಕ್ತಿಜಂಟಿ ಬಾಧ್ಯತೆ ಗುಂಪುಗೆ ಸಾಮರ್ಥ್ಯ ಬಲವರ್ಧನೆ ತರಬೇತಿಯನ್ನು ನಡೆಸಿದ್ದೇವೆ

ಬ್ಯಾಂಕ್ ಸಾಲದ ಅರ್ಜಿ

ತಿಂಗಳ ಅವಧಿಯಲ್ಲಿ ಯಕ್ಲಾಸಪೂರ ಗ್ರಾಮದ ಅಮರೇಶ್ವರ ಜೆಎಲ್ ಜಿ ಹಾಗೂ ಡಂಬಳ ಗ್ರಾಮದ ಶರ್ಮೆಶವಾಲಿ ಜೆಎಲ್ ಜಿ ಎರಡು ಗುಂಪುಗಳು ಬ್ಯಾಂಕ ನ ಸಾಲಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಜಂಟಿ ಬಾಧ್ಯತೆ ಗುಂಪು ಸಭೆ

ಗದಗ ಜಿಲ್ಲಾ ಮೇವುಂಡಿ ಮತ್ತು ರಾಮೇನಹಳ್ಳಿ ಗ್ರಾಮಗಳಲ್ಲಿ ಜಂಟಿ ಬಾಧ್ಯತೆ ಗುಂಪುಗಳಿಗೆ ಮಾಸಿಕ ಗುಂಪು ಸಭೆಗಳನ್ನು ನಡೆಸಲಾಯಿತು.

ಬ್ಯಾಂಕ್ ಜೊತೆ ಸಾಲದ ಸಂಪರ್ಕ

ಗದಗ ಜಿಲ್ಲಾ ಮೇವುಂಡಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ಅಮರೇಶ್ವರ ಜಂಟಿ ಬಾಧ್ಯತೆ ಗುಂಪಿಗೆ ಬ್ಯಾಂಕ್ ಜೊತೆ ಸಾಲದ ಸಂಪರ್ಕ ಮಾಡಲಾಗಿದೆ.

ಜೀವನೋಪಾಯದ ಅವಕಾಶಗಳನ್ನು ಅನ್ವೇಷಿಸುವುದು

ಯಕ್ಲಾಸಪೂರದಲ್ಲಿರುವ ಅಮರೇಶ್ವರ ಜೆಎಲ್‌ಜಿ ಸದಸ್ಯರಾದ ಅನ್ನಪೂರ್ಣ ಅವರು ಹೊಲಿಗೆ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ, ಇದು ಅವರ ಕುಟುಂಬವನ್ನು ಸುಸ್ಥಿರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ.

ಗದಗ ಜಿಲ್ಲಾ ಮೇವುಂಡಿ ಗ್ರಾಮದ ಜಂಟಿ ಬಾಧ್ಯತೆ ಗುಂಪಿನ ಸದಸ್ಯರಾದ ಚಿತ್ರಾ ಅವರು ಡೀಲ್ ಫೌಂಡೇಶನ್‌ನಲ್ಲಿ ಜೀವನೋಪಾಯ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಹೊಲಿಗೆ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಗದಗ ಜಿಲ್ಲಾ ಹಾರೋಗೇರಿ ಗ್ರಾಮದ ರೇಷ್ಮಾ ಅವರು ಡೀಲ್ ಫೌಂಡೇಶನ್‌ನೊಂದಿಗೆ ಜೀವನೋಪಾಯದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಜೀವನೋಪಾಯಕ್ಕಾಗಿ ಕಿರಾಣಿ ಮತ್ತು ದಿನಸಿ ಅಂಗಡಿಯನ್ನು ಪ್ರಾರಂಭಿಸಿದ್ದಾರೆ.

ಗದಗ ಜಿಲ್ಲಾ ಡೋಣಿ ಗ್ರಾಮದ ಶಂಕರಮ್ಮ ಸ್ವಂತ ಮನೆ ಅಲಂಕಾರಿಕ ವಸ್ತುಗಳ ವ್ಯಾಪಾರ ಆರಂಭಿಸಿದ್ದಾರೆ.

ಗದಗ ಜಿಲ್ಲಾ ಯಕ್ಲಾಸಪೂರ ಗ್ರಾಮದ ಮನ್ನವ್ವ ಡೀಲ್ ಫೌಂಡೇಶನ್‌ನಲ್ಲಿ ಜೀವನೋಪಾಯದ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಮೇಕೆ ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ ಗದಗ ಜಿಲ್ಲಾ ಮೇವುಂಡಿ ಗ್ರಾಮದ ಕಮಲವ್ವ ಛಲಬಿಡದೆ ಡೀಲ್ ಫೌಂಡೇಶನ್‌ನಲ್ಲಿ ಜೀವನೋಪಾಯದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅವರು ಸಣ್ಣ ಉದ್ಯಮವನ್ನು ಪ್ರಾರಂಭಿಸಿದ್ದಾರೆ.

ಡೀಲ್ ಫೌಂಡೇಶನ್‌ ಸಿಬ್ಬಂದಿಗಳಾದ  ಶಿವಕುಮಾರ ಮತ್ತು ರೇಣುಕಾ ಗದಗ ಜಿಲ್ಲೆಯ ಮೇವುಂಡಿ ಗ್ರಾಮದ ಡೀಲ್ ಫೌಂಡೇಶನ್‌ ಕಚೇರಿಯ ಉತ್ಪಾದನೆಯ ಉತ್ಪನ್ನಗಳ ಗೃಹ ದಲ್ಲಿ ಮೇಣದಬತ್ತಿ ತಯಾರಿಕೆಯ ತರಬೇತಿಯಲ್ಲಿ ತೊಡಗಿರುವುದು. 

ಹೊಲಿಗೆ ತರಬೇತಿ

ಗದಗ ಜಿಲ್ಲೆಯ ಮೇವುಂಡಿ ಗ್ರಾಮದ ಡೀಲ್ ಫೌಂಡೇಶನ್‌ ಕಚೇರಿಯ ಹೊಲಿಗೆ ತರಬೇತಿ ಕೇಂದ್ರದಲ್ಲಿ ಉಡುಪು ತರಬೇತಿ ತರಗತಿಗಳು ಮುಂದುವರೆದಿವೆ.

ಎರೆಹುಳು ಗೊಬ್ಬರ ತಯಾರಿಕೆ

ಗದಗ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿರುವ ಡೀಲ್ ಫೌಂಡೇಶನ್‌ ಕಚೇರಿಯ ಕೃಷಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಎರೆಹುಳು ಗೊಬ್ಬರ ತಯಾರಿಕೆಯ ಕಾರ್ಯ ಮುಂದುವರೆದಿದೆ.

ಮುಂಬರುವ ಈವೆಂಟ್ ಮುಖ್ಯಾಂಶಗಳು:

  • ವಿಕಲಚೇತನತೆಯನ್ನು ಹೊಂದಿರುವ ಎರಡು ಜಂಟಿ ಬಾಧ್ಯತೆ ಗುಂಪುಗಳನ್ನು ರಚಿಸುವುದು.
  • ಎರಡು ಜಂಟಿ ಬಾಧ್ಯತೆ ಗುಂಪುಗಳಿಗೆ ಬ್ಯಾಂಕ್ ಸಂಪರ್ಕವನ್ನು ಕಲ್ಪಿಸುವುದು.
  • ಗುಂಪುಗಳಿಗೆ ಸಾಮರ್ಥ್ಯ ಬಲವರ್ಧನೆ ತರಬೇತಿ ಮತ್ತು ಜೀವನೋಪಾಯದ ತರಬೇತಿಯನ್ನು ನಡೆಸಲಾಗುವುದು.
  • ಹೊಲಿಗೆ ತರಬೇತಿ ಕೇಂದ್ರದಲ್ಲಿ ಉಡುಪುಗಳ ತಯಾರಿಕೆಯ ತರಬೇತಿಯು ಮುಂದುವರೆಯುವುದು.
  • ತೋಟದ ಕೃಷಿ ತರಬೇತಿ ಕೇಂದ್ರ ಕಾರ್ಯ ಮುಂದುವರೆಯುವುದು.
  • ಎರೆಹುಳು ಗೊಬ್ಬರ ತಯಾರಿಕೆ.
  • ಪೇರಲ ಮತ್ತು ಕರಿಬೇವು ಎಲೆಗಳ ಕೊಯ್ಲು ಮತ್ತು ಮಾರಾಟ ಮಾಡುವುದು.
  • ರೈತ ಉತ್ಪಾದನೆ ಕಂಪನಿ ( ಎಪ್ ಪಿ ಓ ) ತಯಾರಿ ಕೆಲಸ.
  • ವಿಕಲಚೇತನರ ಸಹಕಾರಿ ಸಂಘದ ನೋಂದಣಿ ಕಾರ್ಯ.

Get a report of all our on field work every month.

You have Successfully Subscribed!

Share This