Select Page

ನನ್ನ ಕಥೆ – ವನಜಾಕ್ಷಿ

ವನಜಾಕ್ಷಿ ಅವರೊಂದಿಗೆ ಅವರ ಜೀವನದ ಅನುಭವಗಳು ಮತ್ತು ಡೀಲ್ ಫೌಂಡೇಶನ್ ನೊಂದಿಗೆ ಒಡನಾಟದ ಮಾತುಗಳು.

ನಮಸ್ಕಾರ ವನಜಾಕ್ಷಿ ಅವರೇ ನಿಮ್ಮ ವಿಕಲಚೇತನ ಮತ್ತು ಅದು ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದರ ಕುರಿತು ನಾನು ನಿಮ್ಮೊಂದಿಗೆ ಸ್ವಲ್ಪ ಮಾತನಾಡಲು ಬಯಸುತ್ತೇನೆ. ಮಾತನಾಡಲು ನಿಮ್ಮ ಅಭ್ಯಂತರವೇನು ಇಲ್ಲ ಅಲ್ಲವೆ,

ಖಂಡಿತವಾಗಿಯೂ ಯಾವುದೇ ರೀತಿಯ ಅಭ್ಯಂತರವಿಲ್ಲ, ನನ್ನ ಜೀವನದ ಬಗ್ಗೆ ನಿಮ್ಮ ಸಂಸ್ಥೆಯ ಜೊತೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ನಿಮ್ಮ ವಿಕಲಚೇತನ ಬಗ್ಗೆ ನಮ್ಮೊಂದಿಗೆ ಹಂಚಿಕೊಳ್ಳಲು ಬಯಸುವಿರಾ ?

ಮೊದಲನೆಯದಾಗಿ ಡೀಲ್ ಫೌಂಡೇಶನ್ ಗೆ ಹೃದಯಪೂರ್ವಕವಾದ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ, ನನ್ನ ಹೆಸರು ವನಜಾಕ್ಷಿ ಚೆನ್ನಪ್ಪ ಕಪ್ಪತ್ತನವರ ಮುಂಡರಗಿ ತಾಲ್ಲೂಕಿನ ಹಳ್ಳಿಗುಡಿ ನಿವಾಸಿಯಾದ ನಾನು ವಿಕಲಚೇತನತೆಯನ್ನು ಹೊಂದಿರುವ ನಾನು ಈ ಪರಿಸ್ಥಿತಿಗೆ ಬಾಲ್ಯದ ಜೀವನದಲ್ಲಿ ಪೊಲಿಯೊ ಪರಿಣಾಮದಿಂದಾಗಿ ನನ್ನ ಬಲಗಾಲಿನಲ್ಲಿ ಶಕ್ತಿಯನ್ನು ಕಳೆದುಕೊಂಡೆ, ಇದಕ್ಕೆ ಪೊಲಿಯೋ ಆದ ಮೊದಲು ವಿಫರಿತವಾದ ಜ್ವರ ಕಾಣಿಸಿಕೊಂಡು ನಂತರ ಕ್ರಮೇಣವಾಗಿ ನನ್ನ ಬಲಗಾಲು ನಿಶಕ್ತಿಯಾಗಿ ಗಾತ್ರದಲ್ಲಿ ಸಣ್ಣದಾಗಿ ನಡೆದಾಡಲು ಸಾಧ್ಯವಾಗಲಿಲ್ಲ. ನಂತರ ಆಯುರ್ವೇದಿಕ್ ಔಷಧವನ್ನು ಕಾಲಿಗೆ ಹಚ್ಚಿ ಪ್ರತಿದಿನ ಮಸಾಜ್ ಮಾಡಿದ್ದರಿಂದ ನಂತರ ಸ್ವಲ್ಪಮಟ್ಟಿಗೆ ಸುಧಾರಣೆ ಕಾಣಿಸಿಕೊಂಡರು ಶಾಲಾ ಕಾಲೇಜುಗಳಲ್ಲಿ ತೊಡಗಿಕೊಂಡು Bed ಶಿಕ್ಷಣವನ್ನು ಮುಗಿಸಿದೆ.

ಈ ನಿಮ್ಮ ಸ್ಥಿತಿಯು ನಿಮ್ಮನ್ನು ಹೇಗೆ ಪ್ರಭಾವಿಸಿದೆ ?

ನಾನು ಯಾವಾಗಲೂ ಈ ಸ್ಥಿತಿಯನ್ನು ಯಾವುದೇ ರೀತಿಯ ಮನಸ್ಸಿಗೆ ತೆಗೆದುಕೊಳ್ಳದೆ ಪ್ರತಿ ಹೆಜ್ಜೆ-ಹೆಜ್ಜೆಗೂ ಮುಂದಿನ ನನ್ನ ವಿಚಾರ ದಾರಿಯತ್ತ ಸಾಗುತ್ತಿದ್ದೇನೆ, ಆದರೆ ಇತ್ತೀಚಿನ ದಿನಗಳಲ್ಲಿ ನನ್ನ ಕಾಲಿನ ಶಕ್ತಿಯು ಇನ್ನೂ ಕುಗ್ಗುತ್ತಾ ಹೋಗುತ್ತಿದೆ, ಆದರೆ ಈ ನನ್ನ ಧೈರ್ಯಕ್ಕೆ ಡೀಲ್ ಫೌಂಡೇಶನ್ ಸಿಬ್ಬಂದಿಯಿಂದ ನಾನು ಪಡೆದ ಸಹಾಯ ಮತ್ತು ಬೆಂಬಲ ಸಮಾಲೋಚನೆಗಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ ಮತ್ತು ಭರವಸೆ ಹೊಂದಿದ್ದೇನೆ.

ಡೀಲ್ ಫೌಂಡೇಶನ್ ನಿಂದ ನನಗೆ ಸಾಕಷ್ಟು ಸಹಾಯ-ಸಹಕಾರ ಸಿಕ್ಕಿದೆ, ಅದರೊಂದಿಗೆ ನನ್ನದೊಂದು ಆಸೆ ಏನೆಂದರೆ ನನ್ನ ಬಲಗಾಲಿಗೆ ಒಂದು ಗುಣಮಟ್ಟದ ಕ್ಯಾಲಿಪರ್ ಅಳವಡಿಸಿ ಕೊಟ್ಟರೆ ನನ್ನ ಜೀವನದ ದಾರಿಯನ್ನು ಖುಷಿಖುಷಿಯಾಗಿ ಸಾಗಿಸುವುದರ ಜೊತೆಗೆ ಸಂಸ್ಥೆಗೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದು ಹೇಳಲು ಇಷ್ಟ ಪಡುತ್ತೇನೆ.

ನೀವು ನಿಮ್ಮ ಕೆಲಸ ಕಾರ್ಯದಲ್ಲಿ ಹೇಗೆ ತೊಡಗಿಕೊಂಡಿದ್ದೀರಿ ?

ನಾನು ನಿಜವಾದ ಸತ್ಯತೆ ಏನೆಂದರೆ, ನಾನು ಒಂದು ಒಳ್ಳೆಯ ಶಿಕ್ಷಣವನ್ನು ಪಡೆದಿದ್ದು ಅಂದರೆ ಶಿಕ್ಷಕಿಯ ವೃತ್ತಿಯ ಶಿಕ್ಷಣವನ್ನು ಪಡೆದಿದ್ದೇನೆ, ಅದರಿಂದ ನಾನು ಕೆಲವು ವರ್ಷಗಳ ಕಾಲ ಸರ್ಕಾರಿ ಉದ್ಯೋಗವನ್ನು ನಂಬಿಕೊಂಡು ಯಾವುದೇ ರೀತಿಯ ಕೆಲಸಕಾರ್ಯಗಳಲ್ಲಿ ತೊಡಗದೆ ಓದುತ್ತಿದ್ದೆ, ನಂತರ ಅದು ಫಲಸದೆ ಕಾರಣ ನಾನು ಆರು ವರ್ಷದ ಹಿಂದೆ ಒಂದು ಸಣ್ಣದಾದ ಕಿರಾಣಿ ಅಂಗಡಿಯಲ್ಲಿ ಜೀವನವನ್ನು ಸಾಗಿಸುತ್ತ, ಇತ್ತೀಚಿನ ದಿನಗಳಲ್ಲಿ ರೊಟ್ಟಿ ಮಷಿನ್ ಹಾಕಿ ಗದಗ  ಮುಂಡರಗಿ ಮತ್ತು ನಮ್ಮ ಸ್ಥಳೀಯವಾಗಿ ರೊಟ್ಟಿ ವ್ಯಾಪಾರವನ್ನು ಮಾಡುತ್ತಿದ್ದೇನೆ, ಇದರ ಜೊತೆಗೆ ಬಟ್ಟೆ ವ್ಯಾಪಾರವನ್ನು ತೊಡಗಿಸಿಕೊಂಡಿದ್ದೆನೆ.

ಇದರಲ್ಲಿ ನನ್ನದೊಂದು ಮಾತು ನನ್ನ ರೊಟ್ಟಿ ವ್ಯಾಪಾರ ಮಂದಗತಿಯಲ್ಲಿ ಸಾಗುತ್ತಿತ್ತು, ಆದರೆ ಡೀಲ್ ಫೌಂಡೇಶನ್ ಸಂಸ್ಥೆಯ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ‌. ಏಕೆಂದರೆ ರೇಣುಕಾದೇವಿ ಜಂಟಿ ಭಾದ್ಯತೆ ಗುಂಪಿನಿಂದ ಪರಿಚಯಿತಳಾದ ನಾನು ಅವರಿಂದ ಬೇರೆ ಬೇರೆ ಗ್ರಾಹಕರಿಗೆ ಹೆಚ್ಚಿನ ಒಂದು ಸಂಪರ್ಕ ಕಲ್ಪಿಸಿ ನನ್ನ ವ್ಯಾಪಾರವನ್ನು ವೃದ್ಧಿಸಿದ್ದಾರೆ. ಇದರಿಂದಾಗಿ ಸಂಸ್ಥೆಯು ಮಾಡುವ ನಮ್ಮ ವಿಕಲಚೇತನ ಕಾರ್ಯಕ್ಕೆ ನಾನು ಚಿರರುಣಿ.

ಕೊನೆಯದಾಗಿ ಡೀಲ್ ಫೌಂಡೇಶನ್ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ಒಳ್ಳೆಯ ಪ್ರಶ್ನೆ, ಡೀಲ್ ಫೌಂಡೇಶನ್ ನಮ್ಮ ಭಾಗದಲ್ಲಿ ಸುಮಾರು ಐದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯು ಮಾಡುತ್ತಿರುವ ನಮ್ಮ ವಿಕಲಚೇತನ ಅಭಿವೃದ್ಧಿ ಕಾರ್ಯವನ್ನು ನಾನು ಹೇಳಬೇಕೆಂದರೆ ನನಗೆ ಇಡಿ ದಿನವೇ ಸಾಲದು, ಆದರೆ ನಾನು ನನಗೆ ಸಂಸ್ಥೆಯಿಂದ ಆಗಿರುವ ಸಹಾಯವನ್ನು ಹೇಳಲು ಬಯಸುತ್ತೇನೆ.

ನಾನು ಕಳೆದ ವರ್ಷ ಅಂದರೆ ಭಯಾನಕವಾದ ಕರೊಣ ಪರಿಸ್ಥಿತಿಯಲ್ಲಿ ನನ್ನ ವ್ಯಾಪಾರ ನಮ್ಮ ಜೀವನವನ್ನು ಸಾಗಿಸುವುದಕ್ಕೆ ಅಸಾಧ್ಯ ಎನ್ನುವ ಸ್ಥಿತಿಯಲ್ಲಿತ್ತು, ಅಂತಹ ಸಂದರ್ಭದಲ್ಲಿ ಡೀಲ್ ಫೌಂಡೇಶನ್ ನಮ್ಮನ್ನು ಗುರುತಿಸಿ ನಮ್ಮ ಗುಂಪಿನ ಸಹಾಯದಿಂದ ಗ್ರಾಮದ ಬಡತನದ ಜನರಿಗೆ ಕೆಲಸಗಳ ಇಲ್ಲದೆ ಊಟಕ್ಕೆ ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆಯು ಆಹಾರ ಪದಾರ್ಥಗಳನ್ನು ನೀಡಿ ಹಾಗೂ ನಮ್ಮ ಗುಂಪಿಗೆ ಕೆಲಸಕೊಟ್ಟು ಆಗಿನ ಒಂದು ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ. ಇದರೊಂದಿಗೆ ಸಂಸ್ಥೆಯು ಮಾಡುವ ಕೆಲಸವು ಪ್ರತಿ ವಿಕಲಚೇತನರು ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಮತ್ತು ನಾನು ಡೀಲ್ ಫೌಂಡೇಶನ್ ಜೊತೆಗಿನ ನನ್ನ ಒಡನಾಟವನ್ನು ಸ್ವಯಂ ಸೇವಕಳಾಗಿ ನನ್ನ ಸುತ್ತಲೂ ವಾಸಿಸುವ ಜನರಿಗೆ ಬದಲಾವಣೆಯನ್ನು ಕಂಡುಕೊಳ್ಳುವದನ್ನು ಬಯಸುತ್ತೇನೆ. ಧನ್ಯವಾದಗಳು,

ಡೀಲ್ ಫೌಂಡೇಶನ್ ಸಂಸ್ಥೆಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಈ ಸಂದರ್ಭದಲ್ಲಿ ಮತ್ತೊಮ್ಮೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು,

ನಮ್ಮ ಜೊತೆ ನಿಮ್ಮ ಸಮಯವನ್ನು ಕಳೆದಿದ್ದಕ್ಕೆ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ, ಮತ್ತು ಸದಾ ನಿಮ್ಮ ಏಳಿಗೆಗಾಗಿ ಶುಭ ಹಾರೈಸುತ್ತೇನೆ. ಧನ್ಯವಾದಗಳು

Get a report of all our on field work every month.

You have Successfully Subscribed!

Share This