Select Page

ಪರಿಣಾಮಕಾರಿ ಮೌಲ್ಯಮಾಪನ

ಪರಿಣಾಮಕಾರಿ ಮೌಲ್ಯಮಾಪನ

ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಪರಿಣಾಮ ಆತ್ಮಕ ಮೌಲ್ಯಮಾಪನ :

ಡೀಲ್ ಫೌಂಡೇಶನ್ ಸಂಸ್ಥೆಯಿಂದ ವಿಕಲಚೇತನತೆ ಹೊಂದಿರುವ ವ್ಯಕ್ತಿಗಳ ಜೀವನ ಮತ್ತು ಅವರ ವಾಸಿಸುವ ಸಮುದಾಯಗಳ ಮೇಲೆ ನಮ್ಮ ಕೆಲಸದ ಪರಿಣಾಮ ಆತ್ಮಕವನ್ನು ತಿಳಿಯಲು ಮತ್ತು ಮೌಲ್ಯಮಾಪನ ಮಾಡಲು ಸಾಕ್ಷಾಧಾರದ ಮೇಲೆ ಮತ್ತು ಸಹಕಾರ ದೃಷ್ಟಿಯಿಂದ  ಈ ಕೆಳಗಿನ ವಿಧಾನಗಳನ್ನು ಅಳವಡಿಸಿಕೊಳ್ಳುತ್ತೇವೆ. 

  • ಅಭಿವೃದ್ಧಿಯ ಬಗ್ಗೆ ಮೌಲ್ಯಮಾಪನ ಮಾಡಲು ಮತ್ತು ದಾಖಲಾತಿಗಾಗಿ ಸಂಬಂಧಿತ ವಿವರವನ್ನು ಸಂಗ್ರಹಿಸಿ ಮತ್ತು ವಿಶ್ಲೇಷಿಸುವುದು. 
  • ಸಾಧಿಸಿರುವ ಫಲಿತಾಂಶಗಳ ಬಗ್ಗೆ ಪರಿಶೀಲನೆ ನಡೆಸುವುದು.
  • ಗುರುತಿಸಿರುವ ಪರಿಣಾಮಗಳ ಬಗ್ಗೆ ಮೌಲ್ಯಮಾಪನ ಮಾಡುವುದು

ಸಂಸ್ಥೆಯ ಸಹಭಾಗಿಗಳು ಮತ್ತು ಹಿತೈಷಿಗಳೊಂದಿಗೆ ಕೆಲಸ ಮಾಡುವದು.

  1. ಸಮಯ, ಸ್ಥಳ ಭಾಗವಹಿಸುವ ಪ್ರಶ್ನೆಗಳು ಮತ್ತು ಸಂಬಂಧಪಟ್ಟ ಭಾಗಗಳು ಸೇರಿದಂತೆ ವ್ಯಾಪ್ತಿಯನ್ನು ಒಪ್ಪಿಕೊಳ್ಳುವುದು ಮತ್ತು ವ್ಯಾಖ್ಯಾನಿಸುವುದು.
  2. ಪ್ರತಿಯೊಂದು ಭಾಗದಿಂದ ಸಂಬಂಧಿತ ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲು ವ್ಯವಸ್ಥೆಯನ್ನು ರಚಿಸುವುದು.
  3. ಸಂಬಂಧಿತ ದತ್ತಾಂಶಗಳ ಸಮೀಕ್ಷೆ ಮಾಡುವುದು ಮತ್ತು ಅಂತರದ ವಿಶ್ಲೇಷಣೆಯನ್ನು ಕೈಗೊಳ್ಳುವುದು.
  4. ಕೇಂದ್ರೀಕೃತ ಸಮೂಹಗಳು ಮತ್ತು ಅವುಗಳ ಸಮೀಕ್ಷೆಗಳನ್ನು ಒಳಗೊಂಡಂತೆ ಪ್ರಾಥಮಿಕ ಮತ್ತು ಮಾಧ್ಯಮಿಕ ಮೂಲಗಳಿಂದ ಸಂಬಂಧಿತ ದತ್ತಾಂಶಗಳನ್ನು ಸಂಗ್ರಹಿಸುವುದು.
  5. ಫಲಿತಾಂಶಗಳನ್ನು ಪ್ರಮಾಣೀಕರಿಸುವುದು ಮತ್ತು ಕಾಲಾಂತರದಲ್ಲಿ ಅವುಗಳನ್ನು ಟ್ರ್ಯಾಕ್ ಮಾಡುವುದು.

ವಿಕಲಚೇತನ ವ್ಯಕ್ತಿಗಳ ಜೀವನದಲ್ಲಿ ಮತ್ತು ಅವರು ವಾಸಿಸುವ ಸಮುದಾಯಗಳ ಜೀವನದಲ್ಲಿ ನಮ್ಮ ಕೆಲಸದ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಸಮಗ್ರ ಅಭಿವೃದ್ಧಿ ಗುರಿಗಳು (SDGs) ಸಂಬಂಧಿತ ಜಾಗತಿಕ ವರದಿ ಮಾಡುವ ಉಪಕ್ರಮ (GRI) ಮತ್ತು ಇತರ ಸಂಬಂಧಿತ ಮಾನದಂಡಗಳಿಗೆ ಹೊಂದಿಕೊಂಡಂತೆ ಒಂದು ಸೂಕ್ತ ಮೌಲ್ಯಮಾಪನ ಫಲಿತಾಂಶಗಳ ಚೌಕಟ್ಟನ್ನು ಅಭಿವೃದ್ಧಿಪಡಿಸುವುದು.

ವಿಕಲಚೇತನರ ಪರಿಣಾಮ ಆತ್ಮಕ ಮೌಲ್ಯಮಾಪನ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಸಹ-ಉತ್ಪಾದಿಸಲು ಸಮಾನ ಮನಸ್ಕರರ ವೃತ್ತಿಪ ಆನ್‌ಲೈನ್ ಸಮುದಾಯವನ್ನು ರೂಪಿಸಲು ಪ್ರಸ್ತಾಪಿಸುತ್ತೇವೆ ಅದು ಪರಿಣಾಮಗಳನ್ನು ವರದಿ ಮಾಡುವಿಕೆಯನ್ನು ಮತ್ತಷ್ಟು ಒಳಗೊಳ್ಳುವ ಮೂಲಕ ಸುಧಾರಿಸಲು ಸಹಾಯ ಮಾಡುತ್ತದೆ.

Get a report of all our on field work every month.

You have Successfully Subscribed!

Share This